ಮೀರತ್​:ಮದುವೆ ಮನೆ ಊಟವನ್ನು ಬಾಯಿ ಚಪ್ಪರಿಸಿ ತಿನ್ನುವವರು ಒಮ್ಮೆ ಈ ವಿಡಿಯೋ ನೋಡಿದ್ರೆ ಶಾಕ್​ ಆಗುವುದು ಗ್ಯಾರೆಂಟಿ. ಕೇವಲ ಶಾಕ್​ ಮಾತ್ರವಲ್ಲ ಊಟ ತಯಾರಿಸುವವನನ್ನು ಒಮ್ಮೆ ಬಾಯಾರೆ ಶಪಿಸುವುದು ಸಹ ನಿಜವೇ.
ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಮದುವೆಯಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿ ಮೇಲೆ ಉಗಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರೋಟಿ ಮೇಲೆ ಉಗುಳುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರೋಟಿ ತಯಾರಕನನ್ನು ಬಂಧಿಸಲಾಗಿದೆ.
ಇದನ್ನೂ ಓದಿರಿ:VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಆತ್ಮ ಸಂಚಾರದ ದೃಶ್ಯ!? ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನ
ಬಂಧಿತನನ್ನು ಸೊಹೈಲ್​ ಎಂದು ಗುರುತಿಸಲಾಗಿದೆ. ಈತ ಮದುವೆಯಲ್ಲಿ ಅಡುಗೆ ಮಾಡುವಾಗ ರೋಟಿಯನ್ನು ಒತ್ತಿದ ಬಳಿಕ ಅದನ್ನು ಸುಡುವ ಮುನ್ನ ಅದರ ಮೇಲೆ ಉಗುಳುವುದನ್ನು ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮೀರತ್​: ಮದುವೆ ಮನೆ ಊಟವನ್ನು ಬಾಯಿ ಚಪ್ಪರಿಸಿ ತಿನ್ನುವವರು ಒಮ್ಮೆ ಈ ವಿಡಿಯೋ ನೋಡಿದ್ರೆ ಶಾಕ್​ ಆಗುವುದು ಗ್ಯಾರೆಂಟಿ. ಕೇವಲ ಶಾಕ್​ ಮಾತ್ರವಲ್ಲ ಊಟ ತಯಾರಿಸುವವನನ್ನು ಒಮ್ಮೆ ಬಾಯಾರೆ ಶಪಿಸುವುದು ಸಹ ನಿಜವೇ.#UPMan#CCTVCamera#TandooriRotis#Cooking#Wedding#Splitpic.twitter.com/fpwEJEGVWD
— Vijayavani (@VVani4U)February 22, 2021

ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ರೋಟಿ ತಯಾರಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆಯೂ ಹಾಗೂ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಹಿಂದು ಜಾಗರಣ ಮಂಚ್​ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸೊಹೈಲ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿರಿ:ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!
ಈ ವಿಡಿಯೋವನ್ನು ಮೀರತ್​ನ ಮದುವೆ ಸಮಾರಂಭದ ಬಾಂಕ್ವೆಟ್​ ಹಾಲ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂದಿರುವ ಹಿಂದು ಜಾಗರಣ ಮಂಚ್​ ಅಧ್ಯಕ್ಷ ಸಚಿನ್​ ಸಿರೊಹಿ, ಇಂತಹ ಘಟನೆಗಳ ಬಗ್ಗೆ ಪರಿಶೀಲನೆ ನಡೆಸಲು ಸಿಸಿಟಿವಿ ಕ್ಯಾಮೆರಾಗಳನ್ನು ಮದುವೆ ಸ್ಥಳಗಳಲ್ಲಿ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಿಜೆಪಿ ನಾಯಕನ ಕುಟುಂಬದ ನಾಲ್ವರು ನೇಣಿಗೆ ಶರಣು: ಡೆತ್​ನೋಟ್​ನಲ್ಲಿ ಸಾವಿನ ರಹಸ್ಯ ಬಯಲು!

ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್​ ಗೆಳತಿಯರಾ? ಅಪರೂಪದ ಫೋಟೋ ಹಿಂದಿನ ಸತ್ಯಾಂಶವೇನು?

ಪೊಗರಿಗೆ ಸುತ್ತಿಕೊಂಡ ವಿವಾದ!; ಕ್ಷಮೆಯಾಚಿಸಿ ದೃಶ್ಯ ತೆಗೆಯುವುದಾಗಿ ನಂದಕಿಶೋರ್ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
