ರಾಂಚಿ:ಜಿಎಸ್​ಟಿ ಪರಿಚಯವಾದಾಗಿನಿಂದ ಜಿಎಸ್​ಟಿ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಅದೇ ರೀತಿ 3.5 ಕೋಟಿ ರೂಪಾಯಿ ಜಿಎಸ್​ಟಿ ವಂಚನೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಅರೆಸ್ಟ್​ ಮಾಡಲು ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆ ಪ್ರಮಾಣದ ಮೋಸ ಮಾಡಿದ್ದು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ!
ಹೌದು, ಇದು ಸತ್ಯವೇ. ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಮೊಸಾಬೊನಿ ಬ್ಲಾಕ್‌ನ ರೈಪಹರಿ ಗ್ರಾಮದ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ, ಪ್ರತಿದಿನ ನರೇಗಾ ಯೋಜನೆಯಲ್ಲಿ ಸರಿ ಸುಮಾರು 200 ರೂಪಾಯಿ ದುಡಿಯವವನೇ ಈ ಮೋಸ ಮಾಡಿದ್ದು. ಈತ ಬಹುಕೋಟಿ ರೂಪಾಯಿ ಮೌಲ್ಯದ ಕಂಪನಿಯೊಂದರ ಮಾಲೀಕ. ಈತನ ಹೆಸರಿನಲ್ಲಿ ಎಂಎಸ್​ ಸ್ಟೀಲ್​ ಹೆಸರಿನ ಸ್ಟೀಲ್​ ಕಂಪನಿಯಿದೆ. ಆ ಕಂಪನಿಯ 5.58 ಕೋಟಿ ವ್ಯವಹಾರ 3.5 ಕೋಟಿ ರೂಪಾಯಿ ಜಿಎಸ್​ಟಿ ವಂಚನೆಯಾಗಿರುವುದಾಗಿ ದೂರು ದಾಖಲಾಗಿದೆ.
ಇದನ್ನೂ ಓದಿ:ಮುಖದ ಮೇಲಿರುವ ಪಿಗ್ಮಂಟೇಷನ್​, ಬಿಳಿಕೂದಲು ಹೋಗಲಾಡಿಸಲು ಏನು ಮಾಡಬೇಕು?
ಕೂಲಿ ಕಾರ್ಮಿಕನ ಸರಿಯಾದ ವಿಚಾರಣೆ ನಡೆಸಿದ ನಂತರ ನಿಜಾಂಶ ಹೊರಬಿದ್ದಿದೆ. ನಿಜಕ್ಕೂ ಆ ಕೂಲಿ ಕಾರ್ಮಿಕನಿಗೂ ಕಂಪನಿಗೂ ಯಾವುದೇ ಸಂಬಂಧವೇ ಇಲ್ಲ. ಯಾರೊ ದುಷ್ಕರ್ಮಿಗಳು ಈತನ ಪಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಬಳಸಿ ಈ ಮೋಸ ಮಾಡಿದ್ದಾರೆ.
2018ರಲ್ಲಿ ಈ ಕೂಲಿಕಾರ್ಮಿಕನಿಗೆ ಪ್ರತಿ ತಿಂಗಳು ಖಾತೆಗೆ ನೇರವಾಗಿ 2 ಸಾವಿರ ರೂಪಾಯಿ ಬರುವಂತೆ ಮಾಡುವುದಾಗಿ ಈತನ ಸೋದರಳಿಯ ಬೈಲಾ ಮುರ್ಮು ಹೇಳಿದ್ದನಂತೆ. ಅದಕ್ಕೆಂದು ಈತನ ಪಾಸ್​ಬುಕ್​, ಪ್ಯಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ನ್ನು ತೆಗೆದುಕೊಂಡು ಹೋಗಿದ್ದನಂತೆ. ಈ ದಾಖಲೆಗಳನ್ನು ಆತನ ಸಂಬಂಧಿ ಸುನಾರಾಮ್​ ಹೆಂಬ್ರಾಮ್​ ಅವರಿಗೆ ನೀಡಲಾಗಿದೆ. ಅಲ್ಲಿಂದ ದಾಖಲೆಯನ್ನು ಸುಶಾಂತ್​ ಕುಮಾರ್​ ಸಮಂತೊ ಹೆಸರಿನವರಿಗೆ ನೀಡಲಾಗಿದೆ. ನಂತರ ಏನಾಯಿತು ಎನ್ನುವುದರ ಬಗ್ಗೆ ಕಾರ್ಮಿಕನಿಗೂ ಮಾಹಿತಿ ಇಲ್ಲ. ಯಾವುದೇ ಹಣವೂ ನನ್ನ ಖಾತೆಗೆ ಬಂದಿಲ್ಲ ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ:ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ
ಬೆಳಗ್ಗೆ ಕೆಲಸ ಮಾಡುತ್ತಿದ್ದವನನ್ನು ಬಂಧಿಸಿದ ಕಾರಣ ಗ್ರಾಮಸ್ಥರು ಠಾಣೆಯ ಎದುರು ಹೋರಾಟ ನಡೆಸಿದ್ದಾರೆ. ಕಾರ್ಮಿಕನ ತಪ್ಪಿಲ್ಲ ಎನ್ನುವುದು ಅರಿವಿಗೆ ಬಂದ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟು ಕಳುಹಿಸಲಾಗಿದೆ. ನಿಜವಾದ ವಂಚಕರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − thirteen =
Remember me
