ಚೆನ್ನೈ:ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿ ಒಬ್ಬರನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾರೈಕುಡಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಮದುರೈ ಮೂಲದ ಅರಿವಳಗನ್ ಅಲಿಯಾಸ್ ವಿನಿತ್(29) ಎಂದು ಗುರುತಿಸಲಾಗಿದ್ದು, ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿನಿತ್​ಗೆ ಪೊಲೀಸರು ವಾರಕ್ಕೊಮ್ಮೆ ಠಾಣೆಗೆ ಬಂದು ಸಹಿ ಮಾಡಿ ತೆರಳುವಂತೆ ತಿಳಿಸಿದ್ದರು. ಅದರಂತೆ ಭಾನುವಾರ ಸಹಿ ಮಾಡಿ ಠಾಣೆಯಿಂದ ಹೊರ ಬಂದ ವೇಳೆ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ವಿನಿತ್​ರನ್ನು ಸುತ್ತುವರೆದಿದ್ದಾರೆ.
பட்ட பகல்ல இப்புடி ஓட விட்டு வெட்டுறானுங்க 😕காவல்துறை இவனுங்களா புடிச்சு, கையி கால உடைச்சு விட்டாதான் திருந்துவானுங்க#karaikudipic.twitter.com/899RNYK5PH
ಇದನ್ನೂ ಓದಿ:ಕರಗಿದ ರೈಲ್ವೆ ಹಳಿಗಳು; ಲೋಕೋ ಪೈಲಟ್​ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅವಘಡ
ತನ್ನ ಮೇಲೆ ದಾಳಿ ಮಾಡಲು ಬಂದವರಿಂದ ತಪ್ಪಿಸಿಕೊಂಡ ವಿನಿತ್​ ಓಡಲು ಆರಂಭಿಸಿದ್ಧಾರೆ. ಕೆಲ ದೂರ ತೆರಳಿದ ಬಳಿಕ ಎಡವಿ ಬಿದ್ದಾಗ ಅವರನ್ನು ಸುತ್ತುವರೆದ ಆರೋಪಿಗಳು ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಕೂಡಲೇ ಸ್ಥಳೀಯರೊಬ್ಬರು ವಿನಿತ್​ ರಕ್ಷಣೆಗೆ ಧಾವಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ಧಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿನಿತ್​ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ಒಂದರಲ್ಲಿ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ, ವಿನಿತ್​ ಕಾರೈಕುಡಿಯ ಲಾಡ್ಜ್​ ಒಂದರಲ್ಲಿ ತನ್ನ ಸ್ನೇಹಿತರ ಜೊತೆ ತಂಗಿದ್ದ ಎಂದು ವರದಿಯಾಗಿದೆ.
ಪ್ರಕರಣ ಸಂಬಂಧ ಪೊಲೀಸರು ವಿನಿತ್​ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳ ಪತ್ತೆಗೆ ತಂಡ ಒಂದನ್ನು ರಚಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 10 =
Remember me
