ಥಾಣೆ:ಸಹೋದರ ಮತ್ತು ಅತ್ತಿಗೆಯ ಆತ್ಮಹತ್ಯೆಗೆ ಪ್ರಕರಣದ ತನಿಖೆಯ ನಿಧಾನಗತಿಯ ಬಗ್ಗೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಕ್ಯಾಮರಾ ಮುಂದೆಯೇ ತನ್ನ ಬೆರಳುಗಳನ್ನು ಕತ್ತರಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಬಳಿ ನಡೆದಿದೆ.
ಇದನ್ನೂ ಓದಿ:ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ನರ್ಸ್​..!ಧನಂಜಯ್ ನಾನಾವರೆ ಎಂಬಾತನೇ ಬೆರಳು ಕತ್ತರಿಸಿಕೊಂಡಿರುವ ವ್ಯಕ್ತಿಯಾಗಿದ್ದು, ಆತನ ಸಹೋದರನ ಸಾವಿಗೆ ಸಿಗುತ್ತಿಲ್ಲ ಹೀಗಾಗಿ ತಾನು ಈ ಕ್ರಮ ಅನುಸರಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೇ, ತನ್ನ ಬೆರಳುಗಳನ್ನು ಕತ್ತರಿಸಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಆರೋಪಿಗಳನ್ನು ಬಂಧಿಸುವವರೆಗೆ ದೇಹದ ಭಾಗಗಳನ್ನು ಒಂದೊಂದಾಗಿ ಕತ್ತರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರಕ್ಕೆ ಮತ ಹಾಕಿದ ಬೆರಳನ್ನೇ ಕತ್ತರಿಸಿದ್ದೇನೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಈತನ ವಿಡಿಯೋ ವೈರಲ್ ಆದ ಕೂಡಲೇ ತನಿಖೆಯು ತೀವ್ರಗೊಂಡಿದ್ದು, ಶಿವಸೇನಾ ಶಾಸಕ ಬಾಲಾಜಿ ಕಿಣಿಕರ್​ರ ಆಪ್ತ ಸಹಾಯಕ ಶಶಿಕಾಂತ್ ಸಾಠೆ, ಪಪ್ಪು ಕಲಾನಿಯ ಆಪ್ತ ಸಹಾಯಕ ಹಾಗೂ ಎನ್‌ಸಿಪಿ ವಕ್ತಾರ ಕಮಲೇಶ್ ನಿಕಮ್, ಎನ್‌ಸಿಪಿ ವಿದ್ಯಾರ್ಥಿ ಕಾಂಗ್ರೆಸ್ ಪದಾಧಿಕಾರಿ ನರೇಶ್ ಗಾಯಕ್‌ವಾಡ್ ಸೇರಿದಂತೆ ಹಲವರನ್ನು ಥಾಣೆ ಕ್ರೈಂ ಬ್ರಾಂಚ್ ಬಂಧಿಸಿದೆ.
ಏನಿದು ಪ್ರಕರಣ:ಧನಂಜಯ್ ನಾನಾವರೆ ಸಹೋದರನಾಗಿದ್ದ ನಂದಕುಮಾರ್ ನಾನಾವರೆ ತಮ್ಮ ಕುಟುಂಬದೊಂದಿಗೆ ಉಲ್ಲಾಸ್‌ನಗರದ ಆಶೆಲೆಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. 20 ದಿನಗಳ ಹಿಂದೆ ಪತ್ನಿ ಊರ್ಮಿಳಾ ಜತೆ ಬಂಗಲೆಯ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಯ ಕೆಲವು ದಿನಗಳ ನಂತರ ವೀಡಿಯೊವೊಂದು ಹೊರಬಿದ್ದಿದ್ದು, ಕಮಲೇಶ್ ನಿಕಮ್, ಸಂಗ್ರಾಮ್ ನಿಕಲ್ಜೆ, ವಕೀಲರಾದ ದ್ಯಾನೇಶ್ವರ್ ದೇಶಮುಖ್, ನಿತಿನ್ ದೇಶಮುಖ್ ವಿರುದ್ಧ ನಾನಾವರೆ ಗಂಭೀರ ಆರೋಪ ಮಾಡಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
