ಬಕ್ಸರ್​:ಅಂದಾಜು ಮೂರು ವರ್ಷಗಳಿಂದ ತನ್ನಿಂದ ದೂರಾಗಿ ಪ್ರತ್ಯೇಕವಾಗಿ ವಾಸವಾಗಿದ್ದುದಲ್ಲದೆ, ಮತ್ತೆ ತನ್ನೊಂದಿಗೆ ಬರಲೊಪ್ಪದ ಪತ್ನಿಯ ತಲೆಯನ್ನು ಪತಿಯೊಬ್ಬ ನಡುರಸ್ತೆಯಲ್ಲೇ ಕಡಿದು ಹಾಕಿದ್ದಾನೆ. ಬಳಿಕ ಸ್ಥಳೀಯರಿಂದ ಹಲ್ಲೆಗೆ ಒಳಗಾಗುವ ಭೀತಿಯಲ್ಲಿ ಓಡಿ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.ಜಾರ್ಖಂಡ್​ನ ಪಾಕೂರ್​ ಜಿಲ್ಲೆಯ ಚಾಂದಿನಿ ದೇವಿ ಹತಳಾದವಳು. ಗಾರೆ ಕೆಲಸ ಮಾಡಿಕೊಂಡಿದ್ದ ಅಲ್ಗು ಯಾದವ್​ (48) ಕೊಲೆ ಮಾಡಿದವನು. ಇದೀಗ ಈತನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿರುವುದಾಗಿ ಬಕ್ಸರ್​ ಪೊಲೀಸರು ತಿಳಿಸಿದ್ದಾರೆ.
ಅಲ್ಗು ಯಾದವ್​ ಮತ್ತು ಚಾಂದಿನಿ 2013ರಲ್ಲಿ ಮದುವೆಯಾಗಿದ್ದರು. ಕೆಲವರ್ಷಗಳ ಬಳಿಕ ಯಾವುದೋ ವಿಷಯಕ್ಕೆ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸದಾ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಚಾಂದಿನಿ ಪತಿಯಿಂದ ದೂರಾಗಲು ನಿರ್ಧರಿಸಿ, ಪುತ್ರಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಮಾಲ್​ನಲ್ಲಿ ಕೆಲಸ ಮಾಡಿಕೊಂಡು ಪುತ್ರಿಯನ್ನು ಸಾಕುತ್ತಿದ್ದಳು. ಜತೆಗೆ ಅಲ್ಗು ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡಿ ಜೀವನಾಂಶ ಕೊಡುವಂತೆ ಕೋರಿದ್ದಳು.
ಆದರೆ, ಅಲ್ಗು ತನ್ನ ಪತ್ನಿಯ ಬಳಿ ಹೋಗಿ ಕೇಸ್​ ವಾಪಸು ಪಡೆದುಕೊಳ್ಳುವಂತೆಯೂ, ಇನ್ಮುಂದೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿಯೂ ಒತ್ತಾಯಿಸುತ್ತಿದ್ದ. ಆದರೆ ಆತನೊಂದಿಗೆ ಹೋಗಲು ಆಕೆ ನಿರಾಕರಿಸುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:ಅಮ್ಮನ ಮಧ್ಯಾಹ್ನದ ನಿದ್ದೆಗೆಡಸುತ್ತಿರುವ ಸಿಂಹದ ಮರಿಯ ಚಿನ್ನಾಟ ನಗೆ ಮೂಡಿಸದಿರದು…
ಶುಕ್ರವಾರ ಬೆಳಗ್ಗೆ ಚಾಂದಿನಿ ಎಂದಿನಂತೆ ಮಾಲ್​ನತ್ತ ತೆರಳುತ್ತಿದ್ದಳು. ಆಕೆಯನ್ನು ರಸ್ತೆಯಲ್ಲೇ ತಡೆದ ಅಲ್ಗು, ತನ್ನೊಂದಿಗೆ ಬರುವಂತೆಯೂ, ಚೆನ್ನಾಗಿ ನೋಡಿಕೊಳ್ಳುವುದಾಗಿ ಮತ್ತೊಮ್ಮೆ ಆಕೆಯ ಮನವೊಲಿಸಲು ಯತ್ನಿಸಿದ್ದ. ಆದರೆ ಆಕೆ ಇದಕ್ಕೆ ಒಪ್ಪದಿದ್ದಾಗ ತನ್ನೊಂದಿಗೆ ತಂದಿದ್ದ ಹರಿತವಾದ ವಸ್ತುವಿನಿಂದ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಲು ಆರಂಭಿಸಿದ್ದ.
ದಾರಿಹೋಕರು ಆತನ ಮೇಲೆ ಕಲ್ಲಿನ ದಾಳಿ ಮಾಡಿ, ಚಾಂದಿನಿಯನ್ನು ಪಾರು ಮಾಡಲು ಯತ್ನಿಸಿದ್ದರು. ಆದರೂ ಆತ ಹರಿತವಾದ ವಸ್ತುವಿನಿಂದ ಆಕೆಯ ತಲೆ ಕಡಿದು ಹಾಕಿ ಬಳಿಕ ಹತ್ತಿರದ ಪೊಲೀಸ್​ ಠಾಣೆಗೆ ಹೋಗಿ ಶರಣಾದ ಎನ್ನಲಾಗಿದೆ.
ಅಮ್ಮನ ಮಧ್ಯಾಹ್ನದ ನಿದ್ದೆಗೆಡಸುತ್ತಿರುವ ಸಿಂಹದ ಮರಿಯ ಚಿನ್ನಾಟ ನಗೆ ಮೂಡಿಸದಿರದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
