ಭೋಪಾಲ್ :ಗಂಡ ಹೆಂಡತಿ ಜಗಳ ಉಂಡುಮಲಗೋ ತನಕ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಕಟುಕ, ಜಗಳದ ಹಿನ್ನೆಲೆಯಲ್ಲಿ ಮಲಗಿರುವ ಹೆಂಡತಿಯ ಬೆರಳುಗಳನ್ನು ತುಂಡರಿಸಿದ್ದಾನೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಚಿಚೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾಜು ವಂಶಕರ್ ಎಂಬುವನು ಆಗಾಗ್ಗೆ ತನ್ನ ಹೆಂಡತಿಯೊಡನೆ ಜಗಳ ಬೆಳೆಸುತ್ತಿದ್ದ ಎನ್ನಲಾಗಿದೆ. ಮಾರ್ಚ್ 25 ರ ಬೆಳಗಿನ ಜಾವ ಹಿಂದಿನ ದಿನದ ಚಿಕ್ಕ ಜಗಳವನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ವಂಶಕರ್, ಮನೆಯಲ್ಲಿ ಮಲಗಿದ್ದ ಹೆಂಡತಿಗೆ ಕೊಡಲಿಯಿಂದ ಹೊಡೆದಿದ್ದಾನೆ. ಈ ಏಟಿಗೆ ಮಹಿಳೆಯ ಒಂದು ಕೈನ ಹೆಬ್ಬೆರಳು, ಮತ್ತೊಂದು ಕೈನ ಮೂರು ಬೆರಳುಗಳು ತುಂಡಾಗಿವೆ.
ಇದನ್ನೂ ಓದಿ:5 ರೂಪಾಯಿ ತಿಂಡಿ ಕೇಳಿದ ಮಗುವನ್ನು ಕೊಂದೇ ಬಿಟ್ಟ ಈ ಕ್ರೂರಿ ತಂದೆ !
ಸಂತ್ರಸ್ತ ಮಹಿಳೆಯನ್ನು ಭೋಪಾಲ್​ನ ಹಮೀದಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಒಯ್ಯಲಾಗಿದೆ. ಕಟುಕ ಪತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಈ ರೀತಿಯಲ್ಲೇ ಮತ್ತೊಂದು ಕ್ರೂರತನದ ಪ್ರಸಂಗದಲ್ಲಿ ಗಂಡನೊಬ್ಬ ತನ್ನ ಹೆಂಡತಿಯ ಕೈಗಳನ್ನು ತುಂಡರಿಸಿ ಆಕೆಯನ್ನು ಕಾಡಿನಲ್ಲಿ ಬಿಟ್ಟುಬಂದಿದ್ದ ಘಟನೆ ಮಾರ್ಚ್ 22 ರಂದು ರಾಜ್ಯದ ಸಾಗರ್ ಜಿಲ್ಲೆಯಿಂದ ವರದಿಯಾಗಿತ್ತು.
ಕಠಿಣ ಕ್ರಮ :ಇಂಥ ಘಟನೆಗಳ ಬಗ್ಗೆ ತ್ವರಿತ ಗತಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ, “ಈ ಘಟನೆಗಳು ನನ್ನ ಮನಸ್ಸನ್ನು ಕದಡಿಬಿಟ್ಟಿವೆ. ಬೇರೆಯವರು ಮಾಡಿದರೆ ಅದು ಅಪರಾಧ. ಗಂಡನೇ ಕೈ ಕತ್ತರಿಸಿದರೆ ಅದು ನಂಬಿಕೆಯ ಹತ್ಯೆ ಆಗುತ್ತದೆ. ಗಂಡಂದಿರು ತಮ್ಮ ಮನಬಂದಂತೆ ನಡೆದುಕೊಳ್ಳಬಹುದಾ? ಸಾತ್ ಫೇರೆ ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿ ಈ ರೀತಿ ನೋಡಿಕೊಳ್ಳುವುದಾ ? ಇಂಥ ಅಪರಾಧಗಳನ್ನು ತಡೆಯಲು ಗಂಭೀರ ಕಾನೂನುಗಳನ್ನು ರಚಿಸುವ ಬಗ್ಗೆ ಚಿಂತಿಸಲಾಗುತ್ತಿದೆ” ಎಂದಿದ್ದಾರೆ.(ಏಜೆನ್ಸೀಸ್)
ಬಾಂಗ್ಲಾದೇಶದ ಕಾಳಿ ಮಂದಿರದಲ್ಲಿ ಮೋದಿ ಪ್ರಾರ್ಥನೆ
ತೆರೆಯ ಮೇಲೆ ಬ್ಯಾಡ್ಮಿಂಟನ್ ಲೋಕ ತೋರಿಸುವ ‘ಸೈನಾ’
ಸಾಲ ತೀರಿಸಲು ಶ್ರೀಮಂತರ ಮಗನನ್ನು ಅಪಹರಿಸಿದರು, 2 ಕೋಟಿ ರೂ. ಬೇಡಿಕೆ ಇಟ್ಟರು; 7 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು !


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
