ಕೊವಿಡ್​-19 ಶುರುವಾದ ಮೇಲೆ ಹೆಣದ ಹತ್ತಿರ ಹೋಗಲೂ ಜನರು ಭಯಪಡುತ್ತಿದ್ದಾರೆ. ಬೇರೆ ಕಾರಣದಿಂದ ಸತ್ತರೂ ಕೊವಿಡ್​-19 ಇರಬಹುದಾ ಎಂಬ ಅನುಮಾನವೇ ಕಾಡುತ್ತದೆ. ಅದರಲ್ಲೂ ಯಾರಾದರೂ ಸಾರ್ವಜನಿಕ ಸ್ಥಳದಲ್ಲೇ ಮೃತಪಟ್ಟರೆ, ಅವರೆಡೆಗೆ ಜನರು ತಿರುಗಿ ಕೂಡ ನೋಡದೆ ಇರುವ ಘಟನೆಗಳೂ ಮೇಲಿಂದ ಮೇಲೆ ನಡೆಯುತ್ತಲೇ ಇವೆ.
ಇದೀಗ ಬಿಹಾರದಲ್ಲೂ ಕೂಡ ಅಂಥದ್ದೇ ಮನಕಲಕುವ ಘಟನೆ ನಡೆದಿದೆ. ಭಗಲ್​​ಪುರದ ನಿವಾಸಿಯೋರ್ವ ಔಷಧಿ ತೆಗೆದುಕೊಳ್ಳಲು ಮೆಡಿಕಲ್​ ಶಾಪ್​ಗೆ ತೆರಳಿದ್ದರು. ಆದರೆ ಅದೇನಾಯಿತೋ ಔಷಧಿ ಅಂಗಡಿ ಎದುರೇ ಕುಸಿದು, ಮೃತಪಟ್ಟರು.ಆದರೆ ದುರಂತವೆಂದರೆ ಅಲ್ಯಾರೂ ಅವರ ಹತ್ತಿರ ಕೂಡ ಹೋಗಲಿಲ್ಲ. ಸಹಾಯ ಮಾಡಲಿಲ್ಲ. ಆರು ತಾಸು ಮೃತದೇಹ ಅಲ್ಲಿಯೇ ಇದ್ದರೂ ಒಬ್ಬರೂ ಕಣ್ಣೆತ್ತಿ ಕೂಡ ನೋಡಲಿಲ್ಲ.ಇದನ್ನೂ ಓದಿ:ಸುಶಾಂತ್​ ಆತ್ಮಹತ್ಯೆ: ಕರಣ್​ ಜೋಹರ್​ ವಿಚಾರಣೆಯೂ ಇಲ್ಲ!
ಈ ವ್ಯಕ್ತಿ ಅಸ್ತಮಾ ಪಂಪ್​ ತೆಗೆದುಕೊಳ್ಳಲು ಬಂದಿದ್ದರು. ಅದನ್ನು ಖರೀದಿಸಿ ಹೊರಗೆ ಹೋಗುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಔಷಧಿ ಅಂಗಡಿ ಮಾಲೀಕ ತಿಳಿಸಿದ್ದಾರೆ.
ಇದೀಗ ಕರೊನಾ ವೈರಸ್ ಇರುವುದರಿಂದ ನಮಗೆ ಹತ್ತಿರ ಹೋಗಲು ಭಯವಾಯಿತು. ಕೂಡಲೇ ಪೊಲೀಸ್ ಹಾಗೂ ಕೊವಿಡ್​-19 ಹೆಲ್ಪ್​ಸೆಂಟರ್​ಗೆ ಕರೆ ಮಾಡಿದೆವು. ಆದರೆ ಅವರೂ ಕೂಡ ಬೇಗ ಬರಲಿಲ್ಲ ಎಂದವರು ಹೇಳಿದ್ದಾರೆ.ಇದನ್ನೂ ಓದಿ:ಸಾಲು ಸಾಲು ವೆಬ್​ಸಿರೀಸ್​ ಮತ್ತು ಸಿನಿಮಾಗಳನ್ನು ಘೋಷಣೆ ಮಾಡಿದ ನೆಟ್​ಫ್ಲಿಕ್ಸ್ ಇಂಡಿಯಾ
ಕೊನೆಗೆ ಸ್ಥಳೀಯ ಡೆಪ್ಯೂಟಿ ಮೇಯರ್​ಗೆ ಕರೆ ಮಾಡಿದ ಬಳಿಕ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್​ ಧರಿಸಿ ಬಂದು ಮೃತದೇಹವನ್ನು ಅಲ್ಲಿಂದ ಎತ್ತಿದ್ದಾರೆ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.(ಏಜೆನ್ಸೀಸ್​)
PHOTOS: ನಟಿ ರಮ್ಯಾರ ಸೊಟ್ಟ ಮುಖ ನೋಡಿ ಕಂಗಾಲಾದ ನೆಟ್ಟಿಗರು; ಯಾಕೀ ಹುಚ್ಚಾಟ ಎಂದು ಕೇಳುತ್ತಿದ್ದಾರೆ ಅಭಿಮಾನಿಗಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
