ಉತ್ತರಪ್ರದೇಶ:ತವರು ಮನೆಗೆ ಹೋಗಿದ್ದ ಪತ್ನಿಯನ್ನು ಹಿಂತಿರುಗಲು ಎಷ್ಟು ಬಾರಿ ಮನವಿ ಮಾಡಿದರು ಅದಕ್ಕೆ ನಿರಾಕರಿಸಿದಳು ಎಂಬ ಕಾರಣಕ್ಕೆ ಮನನೊಂದ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಸಾಮಾಜಿಕ ತಾಣ ಕಡಿವಾಣಕ್ಕೆ ನಿಮಯ ರೂಪಿಸಲು ಮಕ್ಕಳ ಆಯೋಗ ಶಿಫಾರಸು
ಪತಿಯ ವಿಪರೀತ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ಆಕೆಯ ಪೋಷಕರ ಮನೆಗೆ ತೆರಳಿದ ಬಳಿಕ ಈ ಘಟನೆ ನಡೆದಿದ್ದು, ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.
ಹೆಂಡತಿ ತವರು ಮನೆಗೆ ಹೋದ ಘಟನೆಯಿಂದ ಬೇಸರಗೊಂಡ ಪತಿ, ಆಕೆಯನ್ನು ತನ್ನ ಮನೆಗೆ ಹಿಂತಿರುಗುವಂತೆ ನಿರಂತರವಾಗಿ ಮನವಿ ಮಾಡಿದ್ದಾನೆ. ಆದ್ರೆ, ಇದಕ್ಕೆ ಸ್ಪಂದಿಸದ ಪತ್ನಿ, ಪತಿಯಿಂದ ದೂರ ಉಳಿಯಲು ದೃಢ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮನನೊಂದ ರಾಜೇಶ್ (ಮೃತ ವ್ಯಕ್ತಿ) ವಿಪರೀತ ಮದ್ಯ ಸೇವಿಸಿ ತದನಂತರ ಮನೆಯೊಳಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಇದನ್ನೂ ಓದಿ:ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿ – ಡಿಡಿಪಿಐ ಶ್ರೀಶೈಲ ಬಿರಾದಾರ ಸಲಹೆ
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸುವ ಮುನ್ನ ಕೂಲಂಕುಷ ತನಿಖೆ ನಡೆಸಿದ್ದಾರೆ. ವಿಚಾರಣೆ ನಂತರ ರಾಜೇಶ್‌ಗೆ ಮದ್ಯದ ಚಟವಿತ್ತು ಎಂದು ಖಚಿತಪಡಿಸಿದ್ದಾರೆ. ಆತನ ಕುಡಿತದ ಚಟಕ್ಕೆ ಪತ್ನಿ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದಳು ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ,(ಏಜೆನ್ಸೀಸ್).
ಮಮ್ಮುಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರಕ್ಕೆ ಸಿಕ್ತು ಯು/ಎ ಪ್ರಮಾಣಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − ten =
Remember me
