ವಿಜಯವಾಡ (ಆಂಧ್ರ ಪ್ರದೇಶ):ವಿಜಯವಾಡದ ತಡಿಗಡಪ ಮೂಲದ ಅರವತ್ತು ವರ್ಷದ ವ್ಯಕ್ತಿಯೊಬ್ಬ ಕನಕ ದುರ್ಗ ಸೇತುವೆಯಿಂದ ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ದುರ್ಗಾ ಪ್ರಸಾದ್​ ಮೃತ ದುರ್ದೈವಿ. ಸಹೋದರನ ಮಗನನ್ನು ಜತೆಯಲ್ಲಿ ಕರೆದುಕೊಂಡು ಕನಕ ದುರ್ಗಾ ಸೇತುವೆಗೆ ಪ್ರಸಾದ್​ ಆಗಮಿಸುತ್ತಾರೆ. ಬಳಿಕ ನದಿಗೆ ಪೂಜೆ ಸಲ್ಲಿಸುವುದಾಗಿ ಹೇಳಿ ರೆಕಾರ್ಡ್​ ಮಾಡಲು ಮಗನಿಗೆ ಮೊಬೈಲ್ ಜತೆಯಲ್ಲಿ ಪತ್ರವೊಂದನ್ನು​ ನೀಡುತ್ತಾನೆ. ಸೇತುವೆ ಮೇಲೆ ನಿಂತು ಪೂಜೆ ಮಾಡುತ್ತಾ ಮಗನಿಗೆ ಸ್ವಲ್ಪ ದೂರಕ್ಕೆ ಸರಿಯುವಂತೆ ಹೇಳಿ ದಿಢೀರನೇ ನದಿಗೆ ಹಾರುತ್ತಾನೆ.
ಇದನ್ನೂ ಓದಿ:ತಾವು ವಾಸವಿಲ್ಲದ ಫ್ಲ್ಯಾಟ್ ನಲ್ಲಿ 50 ಲಕ್ಷ ರೂ. ಇಟ್ಟಿದ್ದ ಮಹಿಳಾ ಉದ್ಯಮಿ! ಏನಾಯ್ತು ಆ ದುಡ್ಡು?
ಮೊದಲೇ ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಪ್ರಸಾದ್​ ಮಗನ ಕಣ್ಣೆದುರಲ್ಲೇ ಕೊಚ್ಚಿ ಹೋಗುತ್ತಾನೆ. ಇದನ್ನು ನೋಡಿದ ಮಗನಿಗೆ ದಿಕ್ಕೇ ತೋಚದಂತಾಗುತ್ತದೆ. ಕೊನೆಗೆ ಸ್ಥಳಕ್ಕೆ ಆಗಮಿಸುವ ಪೊಲೀಸರು ಮಗನ ಕೈಯಲ್ಲಿದ್ದ ಡೆತ್​ ನೋಟ್​ ನೋಡುತ್ತಾರೆ. ಅದರಲ್ಲಿ ಅನಾರೋಗ್ಯವನ್ನು ಸಹಿಸದೇ ಆತ್ಮಹತ್ಯೆ ಶರಣಾಗಿದ್ದಾಗಿ ಉಲ್ಲೇಖಿಸಿದ್ದಾರೆ. ಇದೀಗ ದುರ್ಗಾ ಪ್ರಸಾದ್​ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.(ಏಜೆನ್ಸೀಸ್​)
https://www.facebook.com/VVani4U/videos/714213685838680
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 − 19 =
Remember me
