ಆತ ಸಾವಿನ ರಾಯಭಾರಿ. ಏಕೆಂದರೆ, ಮಾದಕ ವಸ್ತುಗಳ ಮಾರಾಟವೇ ಆತ ನ ದಂಧೆಯಾಗಿತ್ತು. ಹೆರಾಯಿನ್​ ನೀಡಿ ಅಪ್ರಾಪ್ರೆಯನ್ನು ಕೊಂದು ಹಾಕಿದ್ದಲ್ಲದೇ, ಶವವನ್ನು ಕಣಿವೆಯಲ್ಲಿ ಬಿಸಾಕಿದ್ದ. ಆದರೆ, ಆಕೆಯ ಹತ್ಯೆಗೆ ಆತನೇ ಕಾರಣ ಎಂದು ನಿರೂಪಿಸಿದ್ದು ಮಾತ್ರ ಆರೋಪಿಯ ಕೋಣೆಯಲ್ಲಿದ್ದ ಅರೆಸುಟ್ಟ ಆಲ್ಯುಮಿನಿಯಂ ಹಾಳೆ ತುಣುಕುಗಳು.
ಶಿಮ್ಲಾದ ಚಿರಗಾಂವ್​ ಜಿಲ್ಲೆಯ ಬೊಂಡಾ ಹಳ್ಳಿಯ ಯುವತಿ 2018ರ ಮಾರ್ಚ್​ 20 ರಂದು ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ಗ್ರಾಮದಿಂದ ರಾತ್ರಿ ಕಾರಿನಲ್ಲಿ ಕರೆದೊಯ್ದ ಆರೋಪಿ ಆಕೆಗೆ ಹೆರಾಯಿನ್​ ನೀಡಿದ್ದ. ದಾರಿಯಲ್ಲಿ ಮತ್ತೊಬ್ಬ ಯುವತಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದ. ಮರುದಿನ ಶಿಮ್ಲಾ ತಲುಪಿದ್ದ ಆವರು ಯುವತಿಯನ್ನು ಮಾರ್ಕೆಟ್​ ಬಳಿ ಇಳಿಸಿದ್ದರು. ಕೆಲ ಸಮಯದ ಬಳಿಕ ಅಲ್ಲಿಗೆ ಬಂದಾಗ ಆಕೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಗೊತ್ತಾಗಿತ್ತು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು. ಆಕೆ ಶವವನ್ನು ಶಿಮ್ಲಾ ಹೊರವಲಯದ ಕಣಿವೆಗೆ ಎಸೆದಿದ್ದ. ಜತೆಗೆ, ಆಕೆಯ ಬ್ಯಾಗ್​ ಹಾಗೂ ಮೊಬೈಲ್​ ಫೋನ್​ ಕೂಡ ಎಸೆದಿದ್ದ.
ಇದನ್ನೂ ಓದಿ:ಐಸಿಸ್​ ಉಗ್ರರು ನಮ್ಮ ನಡುವೆಯೇ ಹೆಚ್ಚಾಗಿದ್ದಾರೆ…! ವಿಶ್ವ ಸಂಸ್ಥೆ ನೀಡಿದೆ ಆಘಾತಕಾರಿ ಮಾಹಿತಿ
ಇದಾದ ಕೆಲ ದಿನಗಳ ಬಳಿಕ ಪ್ರಕರಣಕ್ಕೆ ಸಂಬಧಿಸಿದಂತೆ 42 ವರ್ಷ ವಯಸ್ಸಿನ ಪೃಥ್ವಿರಾಜ್​ನನ್ನು ಪೊಲೀಸರು ಬಂಧಿಸಿದ್ದರು. ಯುವತಿಯ ಸಾವಿಗೆ ಹೆರಾಯಿನ್​ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದೇ ಕಾರಣ ಎಂದು ಗೊತ್ತಾಗಿತ್ತು.
ಆಕೆಗೆ​ ಪ್ರಥ್ವಿರಾಜನೇ ಹೆರಾಯಿನ್ ನೀಡಿದ್ದ ಎಂದು ಸಾಕ್ಷಿಗಳು ಹೇಳಿದ್ದರೂ, ಆರೋಪಿಯೇ ಹೆರಾಯಿನ್​ ದಂಧೆ ನಡೆಸುತ್ತಿದ್ದ ಎಂಬುದು ಸಾಬೀತಾಗಿದ್ದು ಆತನ ಕೋಣೆಯಲ್ಲಿ ಸಿಕ್ಕ ಆಲ್ಯುಮಿನಿಯಂ ಫಾಯಿಲ್​ಗಳಿಂದ. ಅವನ್ನು ವಶಪಡಿಸಿಕೊಂಡು ಪರೀಕ್ಷೆ ನಡೆಸಿದಾಗ ಅದರಲ್ಲಿ ಹೆರಾಯಿನ್​ ಅವಶೇಷಗಳು ಪತ್ತೆಯಾಗಿದ್ದವು.
ಇದನ್ನೂ ಓದಿ:ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ
ಮಾದಕ ವ್ಯಸನಿಗಳು ಅಲ್ಯುಮಿನಿಯಂ ಫಾಯಿಲ್​ ಮೇಲೆ ಹೆರಾಯಿನ್​ ಕಾಯಿಸಿ ಅಥವಾ ಸುಟ್ಟು ಅದರ ಹೊಗೆಯನ್ನು ಎಳೆದುಕೊಳ್ಳುತ್ತಾರೆ.ಇದೇ ಸಾಕ್ಷ್ಯವನ್ನು ಆಧರಿಸಿ ತೀರ್ಪು ನೀಡಿದ ನ್ಯಾಯಾಲಯ, ಹೆರಾಯಿನ್​ ನೀಡುವುದೆಂದರೆ ವಿಷ ನೀಡಿದಂತೆ. ಹೀಗಾಗಿ ಆರೋಪಿಯೇ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಅಭಿಪ್ರಾಯಪಟ್ಟು ಆರೋಪಕ್ಕೆ 10 ವರ್ಷಗಳ ಶಿಕ್ಷೆ ವಿಧಿಸಿತು.
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 4 =
Remember me
