ನವದೆಹಲಿ:ಪ್ರಾಣಿ, ಪಕ್ಷಿ, ಮನುಷ್ಯರದೇಹದಲ್ಲಿ ಎಲ್ಲಿಯಾದರೂ ಗಾಯವಾಗಿದ್ದರೆ, ರಕ್ತಸ್ರಾವ ಆಗುತ್ತದೆ. ಆದರೆ ಮರ ಕಡಿದರೆ ಮನುಷ್ಯರಂತೆ ಕೆಂಪಗೆ ರಕ್ತ ಬರುತ್ತದೆ ಎನ್ನುವ ಸುದ್ದಿಯನ್ನು ನಂಬಲು ಕಷ್ಟವಾದ್ರು ಸತ್ಯ. ಸದ್ಯ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬ ಚಾಕುವಿನಿಂದ ಮರವನ್ನು ಕತ್ತರಿಸಿದಾಗ ಕೆಂಪು ರಕ್ತ ಹೊರಬರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಅದೇ ರೀತಿ ಮತ್ತೊಂದು ಸ್ಥಳದಲ್ಲಿ ಚಾಕುವಿನಿಂದ ಕತ್ತರಿಸಿದಾಗ ಆ ಸ್ಥಳದಲ್ಲೂ ರಕ್ತ ಬರುತ್ತಿರುವುದು ಕಂಡು ಬಂದಿದೆ. ಈಗ ಅದು ಯಾವ ಮರ ಎಂದು ಆಶ್ಚರ್ಯವಾಗುತ್ತಿದೆ. ಈ ಮರದ ಒಳಭಾಗದಲ್ಲಿ ಮನುಷ್ಯರಂತೆ ರಕ್ತ ತುಂಬಿದೆ ಎಂದು ಹೇಳಲಾಗುತ್ತದೆ.
Some trees have high tannin content which can taste unappetising to herbivorous, the tannins affect the colour of its sap, making it redpic.twitter.com/fAOyiQblPX
— Science girl (@gunsnrosesgirl3)April 6, 2024

ಇದು ಬ್ಲಡ್ ವುಡ್ ಟ್ರೀ ಆಗಿದೆ. ಈ  ಮರಗಳಲ್ಲಿ ಕಂಡುಬರುವ ಕೆಂಪು ದ್ರವವು ವಾಸ್ತವವಾಗಿ ರಕ್ತದಂತೆ ಕಾಣುವ ಗಾಢ ಕೆಂಪು ಬಣ್ಣದ ರಸವಾಗಿದೆ. ಇದನ್ನು ವೈಜ್ಞಾನಿಕವಾಗಿ ‘ಕಿನೋ’ ಎಂದು ಕರೆಯಲಾಗುತ್ತದೆ. ಈ ರಸವು ಟ್ಯಾನಿನ್ ಎಂಬ ಸಂಯುಕ್ತದಿಂದ ಸಮೃದ್ಧವಾಗಿದೆ. ಇದು ರಕ್ತದಂತಹ ಬಣ್ಣವನ್ನು ನೀಡುತ್ತದೆ.
ಈ  ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 17 ಸೆಕೆಂಡ್ ಗಳಿರುವ ಈ ವಿಡಿಯೋ ಇದುವರೆಗೆ 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ‘ಮರದಿಂದ ರಕ್ತ ಬರುತ್ತಿದೆ.. ಎಂದರೆ ಅದು ಜೀವಂತವಾಗಿದೆ’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಮೇಶ್​​ ಅರವಿಂದ್ ಜತೆ ನಟಿಸಿದ್ದ ಬಾಲನಟಿ ಇಂದು ಐಎಎಸ್ ಆಫೀಸರ್

ಬಂಗಾರ ಬಣ್ಣದ ಹಾವು; ಅಪರೂಪದ ಗೋಲ್ಡನ್ ಸ್ನೇಕ್ ನೀವೂ ನೋಡಿ..

ರೀಲ್ಸ್​ ನೋಡಿ 80 ವರ್ಷದ ಮುದುಕನ ಪ್ರೀತಿಯಲ್ಲಿ ಬಿದ್ದ 34ರ ಚೆಲುವೆ

ಇಂದು ಪ್ರಕಟವಾಗಬೇಕಿದ್ದ 5, 8, 9, 11ನೇ ತರಗತಿ ಬೋರ್ಡ್​ ಪರೀಕ್ಷೆ ಫಲಿತಾಂಶಕ್ಕೂ ಮೊದಲೇ ‘ಸುಪ್ರೀಂ’ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + thirteen =
Remember me
