ಲಖನೌ:ಎಲ್ಲ ಧರ್ಮದವರಿಗೂ ಅವರದ್ದೇ ಆದ ರೀತಿಯಲ್ಲಿ ಧಾರ್ಮಿಕ ನಂಬಿಕೆಗಳಿರುತ್ತದೆ. ಅದರಂತೆ ದೇವರ ಪೂಜೆಗೂ ಅವರದ್ದೇ ಆದ ವಿಶೇಷ ಸಂಪ್ರದಾಯಗಳಿರುತ್ತವೆ. ಆದರೆ ಇಲ್ಲೊಬ್ಬ ಮಾಡಿದ ಪೂಜೆಯ ಬಗ್ಗೆ ಕೇಳಿದರೆ ನೀವು ಗಾಬರಿಯಾಗುತ್ತೀರ.
ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆ ಪನುವಾರ್ ಗ್ರಾಮದ ವ್ಯಕ್ತಿಯೊಬ್ಬ ತಾನು ನಂಬುವ ದೇವರಿಗೆ ವಿಶೇಷ ಪೂಜೆ ಅರ್ಪಿಸಿದ್ದಾನೆ. ದೇವರಿಗೆ ಬಲಿ ಹೆಸರಿನಲ್ಲಿ ತಂದೆಯ ಕೈ ಬೆರಳನ್ನೇ ಕತ್ತರಿಸಿದ್ದು, ಪತ್ನಿಯ ಕುತ್ತಿಗೆಯನ್ನೇ ಕೊಯ್ದಿದ್ದಾನೆ.
ಇದನ್ನೂ ಓದಿ:ಅಕೌಂಟ್​ನಲ್ಲಿ 500 ರೂಪಾಯಿ ಬ್ಯಾಲೆನ್ಸ್​ ಕಡ್ಡಾಯ! ಇಂದಿನಿಂದಲೇ ಹೊಸ ನಿಯಮ ಜಾರಿ
ಆರೋಪಿ ರಾತ್ರಿ ವೇಳೆ ಪೂಜೆ ಮಾಡಲು ಮುಂದಾಗಿದ್ದಾನೆ. ದೇವರ ಪೂಜೆ ಮಾಡುತ್ತಾ ತಂತ್ರ ಮಂತ್ರದ ಬಗ್ಗೆ ಪ್ರೇರೇಪಿತನಾದ ಆತ ತನ್ನ ತಂದೆಯನ್ನು ಬಳಿಗೆ ಕರೆದಿದ್ದಾನೆ. ನೀನು ದೇವರನ್ನು ಮೆಚ್ಚಿಸಬೇಕೆಂದರೆ ನಾನು ಹೇಳಿದಂತೆ ಮಾಡು ಎಂದಿದ್ದಾನೆ. ಮಗ ಏನು ಮಾಡಬಹುದೆಂದು ಗೊತ್ತಿರದ ತಂದೆ ಅವನ ಮಾತಿಗೆ ಒಪ್ಪಿ ಅವನೆದುರು ಕುಳಿತಿದ್ದಾನೆ. ಆಗ ಚಾಕು ತೆಗೆದ ಮಗ ಅಪ್ಪನ ಕೈ ಬೆರಳನ್ನೇ ಕತ್ತರಿಸಿ ಹಾಕಿದ್ದಾನೆ. ನೋವಿನಿಂದ ಎದ್ದ ತಂದೆ, ಮಗನಿಂದ ರಕ್ಷಿಸಿಕೊಳ್ಳಲು ಮನೆ ಬಿಟ್ಟು ಓಡಿದ್ದಾನೆ.
ತಂದೆ ಮನೆ ಬಿಟ್ಟು ಹೋಗುತ್ತಿದ್ದಂತೆ, ಮಗ ತನ್ನ ಪತ್ನಿಯಿದ್ದ ರೂಮಿಗೆ ಹೋಗಿದ್ದಾನೆ. ರೂಮಿನ ಬಾಗಿಲು ಹಾಕಿ ಅವಳ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಹೆಂಡತಿಯ ಶವವನ್ನು ರೂಮಿನಿಂದ ಎಳೆದುತಂದು ದೇವರ ಮುಂದಿಟ್ಟು ವಿಚಿತ್ರ ರೀತಿಯಲ್ಲಿ ಪೂಜೆ ಮಾಡಲಾರಂಭಿಸಿದ್ದಾನೆ.
ಇದನ್ನೂ ಓದಿ:ಬಾಲ್ಯವಿವಾಹ ಮುರಿದುಬಿದ್ದ ಸಿಟ್ಟಿಗೆ ವಧುವಿನ ತಂಗಿಯನ್ನೇ ಹೊತ್ತೊಯ್ದ ವರ!
ಸ್ಥಳೀಯರಿಂದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತಳಾದ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಗೆ ನಿಜವಾದ ಕಾರಣವನ್ನು ತನಿಖೆಯ ನಂತರ ತಿಳಿದುಕೊಳ್ಳಬೇಕಿದೆ. (ಏಜೆನ್ಸೀಸ್​​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + ten =
Remember me
