ಹಮೀರ್​ಪುರ (ಉತ್ತರ ಪ್ರದೇಶ):ಇದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಪಟಿಯಾ ಗ್ರಾಮದ ಕಲ್ಕು ಪ್ರಜಾಪತಿ ಎಂಬ 23 ವರ್ಷದ ಯುವಕನ ಕಥೆ. ನಾಲ್ಕು ತಿಂಗಳ ಹಿಂದೆಯೇ ಈತನ ವಿವಾಹ ನಿಶ್ಚಯವಾಗಿತ್ತು. ಏಪ್ರಿಲ್​ ತಿಂಗಳಿನಲ್ಲಿ ಮದುವೆಯೂ ಫಿಕ್ಸ್​ ಆಗಿತ್ತು.ಆದರೇನು ಮಾಡುವುದು? ಲಾಕ್​ಡೌನ್​ ಘೋಷಣೆ ಆಗಿಹೋಯಿತು. ಮದುವೆಯ ಕನಸು ಕಾಣುತ್ತಿದ್ದ ಎಲ್ಲಾ ವಧು-ವರರಂತೆಯೇ ಇವನಿಗೂ ನಿರಾಸೆ ಆಗಿ ಹೋಯಿತು. ಲಾಕ್​ಡೌನ್​ ಮುಗಿದ ಮೇಲೆ ಮದುವೆಯಾಗೋಣ ಎಂದುಕೊಂಡ. ಆದರೆ ಲಾಕ್​ಡೌನ್​ ಅವಧಿ ವಿಸ್ತರಣೆ ಆಯಿತು. ಕಲ್ಕುಗೆ ಇನ್ನೂ ನಿರಾಸೆಯಾಯಿತು.ಮೇ 3 ರಂದು ಲಾಕ್​ಡೌನ್​ ಅವಧಿ ಮುಕ್ತಾಯವಾಗುತ್ತದೆ ಎಂದು ಘೋಷಣೆಯಾಗಿದ್ದರೂ ಅದನ್ನು ನಂಬುವಂತಿಲ್ಲವಲ್ಲ ಎಂದುಕೊಂಡ ಕಲ್ಕು. ಇನ್ನು ಹೀಗೆಯೇ ಬಿಟ್ಟರೆ ಮದುವೆ ಇನ್ಯಾವಾಗ ಆಗುವುದೋ ಎಂದು ಚಿಂತೆ ಮಾಡಿ, ಮದುವೆ ಆಗಿಯೇ ಬಿಡೋಣ ಎಂದುಕೊಂಡ.ಸರಿ, ಮದುವೆಗೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಕೋರಿಕೊಂಡ. ಮದುವೆಗೆ ಹೋಗಬೇಕೆಂದರೆ ಸುಮಾರು 100 ಕಿ.ಮೀ ದೂರ ಇರುವ ಮಹೊಬಾ ಜಿಲ್ಲೆಯ ವಧುವಿನ ಊರಿಗೆ ಹೋಗಬೇಕಿತ್ತು. ಅದಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ. ಮದುವೆ ಎಂದರೆ ಒಬ್ಬನೇ ಹೋಗಲು ಆಗುವುದಿಲ್ಲವಲ್ಲ. ಮನೆಯವರನ್ನೆಲ್ಲಾ ಕರೆದುಕೊಂಡು ಹೋಗಬೇಕು, ಅದಕ್ಕಾಗಿ ವಾಹನ ವ್ಯವಸ್ಥೆ ಮಾಡಬೇಕು. ಆದ್ದರಿಂದ ಇವೆಲ್ಲಾ ಲಾಕ್​ಡೌನ್​ ನಿಯಮದ ಉಲ್ಲಂಘನೆ ಎಂದುಕೊಂಡು ಪೊಲೀಸರು ಅನುಮತಿ ನೀಡಲಿಲ್ಲ.ಆದರೆ ಈ ಯುವಕನಿಗೋ ಮದುವೆಯ ಅವಸರ. ತಡ ಮಾಡಲಿಲ್ಲ. ಮನೆಯವರು ಬರದಿದ್ದರೇನು? ಮದುವೆಯಾಗುವುದು ತಾನು ತಾನೆ ಎಂದುಕೊಂಡು ಸೈಕಲ್​ ಏರಿಯೇ ಬಿಟ್ಟ! ಮನೆಯಲ್ಲಿ ಬೈಕ್​ ಇದ್ದರೂ ಲೈಸೆನ್ಸ್​ ಇರಲಿಲ್ಲ! ಅದಕ್ಕಾಗಿಯೇ ಫಜೀತಿ ಏಕೆ ಎಂದು ಸೈಕಲ್​ ಮೇಲೆ ಹೋದ. ಅತ್ತ ಮದುಮಗಳು ಮದುವೆಗೆ ರೆಡಿ ಆಗಿ ಕೂತಿದ್ದಳು. ಆಕೆಯ ಮನೆಯವರೂ ಮದುವೆಯ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಮದುಮಗ ಒಬ್ಬನೇ ಬಂದರೂ ಪರವಾಗಿಲ್ಲ ಎಂದು ಒಪ್ಪಿಕೊಂಡಿದ್ದರು. ಇನ್ನೇನು ಬೇಕು ಈ ವರನಿಗೆ? ಸರಿ… ಬರೋಬ್ಬರಿ 100 ಕಿ.ಮೀ ದೂರ ಸೈಕಲ್​ ತುಳಿದ ಕಲ್ಕು. ಮದುಮಗಳನ್ನು ನೋಡಿದ್ದೇ ಆಯಾಸವೆಲ್ಲಾ ದೂರವಾಯಿತು. ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡದೇ ಮದುವೆಯೂ ನಡೆಯಿತು. ಮದುಮಗಳ ಕುಟುಂಬದವರ ಆಶೀರ್ವಾದವೂ ಸಿಕ್ಕಿತು.ಮದುವೆಯೂ ಆಯಿತು, ಇನ್ನೇನು ತಡ. ಅದೇ ಸೈಕಲ್​ ಮೇಲೆ ಮದುಮಗಳನ್ನು ಕುಳ್ಳರಿಸಿಕೊಂಡು ಬಂದ. ಮನೆಯವರ ಆಶೀರ್ವಾದ ಪಡೆದ.ಅಷ್ಟಕ್ಕೂ ನಿಮಗ್ಯಾಕೆ ಮದುವೆಯ ಅಷ್ಟೊಂದು ಗಡಿಬಿಡಿ ಇತ್ತು ಎಂದು ಕೇಳಿದ್ದಕ್ಕೆ ಕಲ್ಕು, ”ನನಗೇನೂ ಅರ್ಜೆಂಟ್​ ಇರಲಿಲ್ಲ. ನನ್ನ ತಾಯಿಗೆ ಅನಾರೋಗ್ಯ. ಮನೆಯಲ್ಲಿ ಆಕೆಯನ್ನು ನೋಡಿಕೊಳ್ಳಲು, ಅಡುಗೆ ಮಾಡಲು ಯಾರೂ ಇಲ್ಲ. ಅದಕ್ಕಾಗಿ ಈ ಮದುವೆ ಬೇಗ ಆಗಬೇಕಾಯಿತು” ಎಂದಿದ್ದಾನೆ!ಕಳೆದ ವಾರ ಇದೇ ರೀತಿ ಮದುವೆಗಾಗಿ 850 ಕಿ.ಮೀ ದೂರ ಸೈಕಲ್​ ತುಳಿದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕುಬಿದ್ದು, ಕ್ವಾರಂಟೈನ್​ನಲ್ಲಿ ಇದ್ದ ಘಟನೆ ನಡೆದಿದೆ.(ಏಜೆನ್ಸಿಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
