ಔರಂಗಬಾದ್​:ಮಹಿಳೆಯೊಬ್ಬಳು ಫ್ರೆಂಡ್​ಶಿಪ್ ನಿರಾಕರಿಸಿದ್ದಕ್ಕೆ ಕೋಪಗೊಂಡ 38 ವರ್ಷದ ವ್ಯಕ್ತಿಯೊಬ್ಬ ಆಕೆಯ ಚಾರಿತ್ರ್ಯ ಹರಣ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಔರಂಗಬಾದ್​ನಲ್ಲಿ ನಡೆದಿದೆ.
ಆ ಮಹಿಳೆ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ ಪುರುಷರನ್ನು ಟಾರ್ಗೆಟ್​ ಮಾಡುವುದೇ ಆಕೆಯ ಕೆಲಸ ಎಂದು ಭಿತ್ತಿಪತ್ರಗಳನ್ನು ಹಂಚುವ ಮೂಲಕ ಮಹಿಳೆಯ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾನೆ.
ಇದನ್ನೂ ಓದಿ:ಗ್ರಾಪಂ ಚುನಾವಣೆ ಫಲಿತಾಂಶ ಪ್ರಭಾವ: ಕೈಯಲ್ಲಿ ದೊಣ್ಣೆ, ಬಡಿಗೆ ಹಿಡಿದ ಮಹಿಳೆಯರು!
ಘಟನೆಯ ವಿವರಣೆಗೆ ಬರುವುದಾದರೆ, ಸತಾರಾದಲ್ಲಿ ಬ್ಯೂಟಿ ಪಾರ್ಲರ್​ ಹೊಂದಿರುವ ಮಹಿಳೆಗೆ ಸೆ.15ರಂದು ಆರೋಪಿಯ ಪರಿಚಯ ಆಗುತ್ತದೆ. ಇದಾದ ಬಳಿಕ ಆತ ಮಹಿಳೆಗೆ ಪದೇಪದೆ ಕರೆ ಮಾಡುವುದು ಮತ್ತು ಮೆಸೇಜ್​ ಮಾಡಲು ಆರಂಭಿಸಿದ್ದಾನೆ. ಅಲ್ಲದೆ, ಬೇರೆ ಬೇರೆ ಹೋಟೆಲ್​ಗಳಲ್ಲಿ ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ. ಆದರೆ, ಇದ್ಯಾವುದಕ್ಕೂ ಮಹಿಳೆ ಸೊಪ್ಪು ಹಾಕಲಿಲ್ಲ. ಇದರಿಂದ ಅಸಮಾಧಾನಗೊಂಡ ಆರೋಪಿ ಆಕೆಯ ಮಾನಹಾನಿಗೆ ನಿರ್ಧರಿಸಿದ.
ಕರಪತ್ರಗಳ ಮೂಲಕ ಚಾರಿತ್ಯ ಹರಣ ಮಾಡುವ ಕೆಟ್ಟ ಯೋಜನೆ ಹಾಕಿಕೊಂಡ ಆರೋಪಿ, ಆಕೆಯ ಚಾರಿತ್ರ್ಯ ಸರಿಯಿಲ್ಲ, ಆಕೆಯನ್ನು ಬಹಿಷ್ಕರಿಸಿ ಎಂದು ಬರೆದು ಸ್ಥಳೀಯವಾಗಿ ಹಂಚಿದ್ದಾನೆ. ಇದರಿಂದ ತೀವ್ರ ಪರಿಣಾಮ ಎದುರಿಸಿದ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಆರೋಪಿಯ ವರ್ತನೆಯಿಂದಾಗಿ ನನ್ನ ವ್ಯವಹಾರವೂ ಹಾಳಾಗಿ ಹೋಯಿತು ಎಂದಿದ್ದಾಳೆ.
ಇದನ್ನೂ ಓದಿ:Web Exclusive | ಗ್ರಾಪಂ ಚುನಾವಣೆ ಸೋತವರಿಗೆ ಸಾಲ ತೀರಿಸೋ ಚಿಂತೆ; ಗೆದ್ದವರಿಗೆ ಹಣ ವಾಪಸ್ ತೆಗೆಯೋ ಲೆಕ್ಕಾಚಾರ
ಈಗಾಗಲೇ ಕರೊನಾ ಲಾಕ್​ಡೌನ್​ನಿಂದ ನಷ್ಟದಲ್ಲಿದ್ದೇನೆ. ಇದೀಗ ಬಿಸಿನೆಸ್​ ಮತ್ತಷ್ಟು ಹಾಳಾಯಿತು ಎಂದು ದೂರಿನಲ್ಲಿ ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕಣ್ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಕರೊನಾ ಲಸಿಕೆ ಬಳಕೆಗೆ ಓಕೆ: ಭಾರತದಲ್ಲಿ ಕೋವಿಶೀಲ್ಡ್ ತುರ್ತು ಬಳಕೆಗೆ ಸಿಕ್ಕಿತು ಹಸಿರು ನಿಶಾನೆ

ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರೈತ: ಡೆತ್​ನೋಟ್​ನಲ್ಲಿದೆ ನೋವಿನ ಮಾತು!

2020ರ ಒಂದು ಕೆಟ್ಟ ಕನಸು.. ಕೋವಿಡ್-19

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twelve =
Remember me
