ಹೈದರಾಬಾದ್​:ಕಾನೂನು ಬಾಹಿರವಾಗಿ ನಡೆದ ಕೋಳಿಪಡೆಯಲ್ಲಿ ಕೋಳಿಯೇ ಅದರ ಮಾಲೀಕನ ಪ್ರಾಣ ತೆಗೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದೀಗ ಕೋಳಿ ಮತ್ತು ಕೋಳಿಪಡೆ ಆಯೋಜಕ ಜೈಲು ಕಂಬಿ ಎಣಿಸುವಂತಾಗಿದೆ.
ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಯೆಲ್ಲಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22ರಂದು ಕೋಳಿಪಡೆ ಆಯೋಜಿಸಲಾಗಿತ್ತು. ಪೊಲೀಸರಿಗೆ ತಿಳಿಯದಂತೆ ಕದ್ದು ಮುಚ್ಚಿ ಈ ಕೆಲಸವನ್ನು ಮಾಡಲಾಗುತ್ತಿತ್ತು. ನಾನಾ ಊರುಗಳಿಂದ ಜನರು ಕೋಳಿ ತೆಗೆದುಕೊಂಡು ಕೋಳಿ ಜಗಳ ಮಾಡಿಸಲು ಮತ್ತು ನೋಡಲು ಬಂದಿದ್ದರು. ತನುಗುಲ್ಲಾ ಸತೀಶ್‌(45) ಹೆಸರಿನ ವ್ಯಕ್ತಿಯೂ ತನ್ನ ಕೋಳಿಯೊಂದಿಗೆ ಪಡೆಗೆ ಬಂದಿದ್ದ. ಆತನ ಕೋಳಿಯ ಕಾಲಿಗೆ ಕತ್ತಿ ಕಟ್ಟಿ ಹಾರಿ ಬಿಟ್ಟಾಗ ಅದು ವಾಪಾಸು ಬಂದು ಸತೀಶ್​ನ ತೊಡೆ ಸಂದಿಗೆ ಕತ್ತಿ ತಾಕಿಸಿದೆ. ಇದರಿಂದಾಗಿ ಸತೀಶ್​ ಗಂಭೀರ ಗಾಯಾಳುವಾಗಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಆತ ಅಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಸತೀಶ್​ನ ಕೋಳಿ ಮತ್ತು ಕೋಳಿಪಡೆ ಆಯೋಜನೆ ಮಾಡಿದ್ದವರಲ್ಲಿ ಒಬ್ಬನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪೊಲೀಸ್​ ಠಾಣೆಯಲ್ಲಿ ಕೋಳಿಯನ್ನು ಕಟ್ಟಿ ಹಾಕಲಾಗಿದೆ. ಅದಕ್ಕೆ ಪೊಲೀಸರು ಮೇವು ಕೊಟ್ಟಿರುವುದಾಗಿ ಹೇಳಲಾಗಿದೆ. ಆದರೆ ಈ ಕೋಳಿಗೆ ಏನು ಶಿಕ್ಷೆ ಕೊಡಲು ಸಾಧ್ಯ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಒಬ್ಬ ಮಗಳ ಪ್ರಾಣ ಉಳಿಸುವುದಕ್ಕಾಗಿ ಇನ್ನೊಬ್ಬ ಮಗಳನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ ತಂದೆ ತಾಯಿ!

ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
