ನಾಗ್ಪುರ:ಕೆಲವರಿಗೆ ಅದೆಷ್ಟು ವಿಚಿತ್ರ ಬಯಕೆಗಳಿರುತ್ತವೆಯೆಂದರೆ, ಅದೇ ಬಯಕೆಗಳಿಂದಾಗಿ ಕೆಲ ಬದುಕೇ ಮುಗಿದುಬಿಡುತ್ತದೆ. ಅದೇ ರೀತಿ ಪ್ರಿಯತಮನೊಂದಿಗೆ ಡಿಫರೆಂಟ್​ ಆಗಿ ಸೆಕ್ಸ್​ ಮಾಡಬೇಕೆಂದುಕೊಂಡ ಮಹಿಳೆಯೊಬ್ಬಳು, ಆತನ ಸಾವಿಗೆ ಕಾರಣವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಟ್ರಂಪ್​ ರಾಜೀನಾಮೆ ನೀಡದಿದ್ದರೆ ನಾವೇ ಅವರನ್ನು ಪದಚ್ಯುತಿ ಮಾಡುತ್ತೇವೆ; ಸ್ಪೀಕರ್​ ನ್ಯಾನ್ಸಿ ಪೆಲೋಸಿ ಎಚ್ಚರಿಕೆ
ಆಕೆಗೆ ಮದುವೆಯಾಗಿ ಒಂದು ಮಗುವಿದೆ. ಗಂಡನೊಂದಿಗೆ ಸುಖವಾಗಿಯೇ ಇದ್ದರು, ಮತ್ತೊಬ್ಬ ಪುರುಷನೊಂದಿಗೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಸುಮಾರು ಐದು ವರ್ಷದಿಂದ ಈ ಅಕ್ರಮ ಸಂಬಂಧ ನಡೆಯುತ್ತಿತ್ತು. ಶುಕ್ರವಾರದಂದು ಪ್ರಿಯಕರನೊಂದಿಗಿರುವ ಮನಸ್ಸು ಮಾಡಿದ ಮಹಿಳೆ, ಆತನೊಂದಿಗೆ ಲಾಡ್ಜ್​ ಒಂದಕ್ಕೆ ಹೋಗಿದ್ದಾಳೆ. ಅಲ್ಲಿ ಆತನೊಂದಿಗೆ ಡಿಫರೆಂಟ್​ ಸೆಕ್ಸ್​ ಬಯಕೆ ಹೇಳಿಕೊಂಡಿದ್ದಾಳೆ.
ಡಿಫರೆಂಟ್​ ಸೆಕ್ಸ್​ ಮಾಡಬೇಕೆಂಬ ಬಯಕೆಯಿಂದ, ಪ್ರಿಯಕರನನ್ನು ಖುರ್ಚಿ ಮೇಲೆ ಕೂರಿ, ನೈಲಾನ್​ ಹಗ್ಗದಿಂದ ಆತನ ಕೈ ಕಾಲುಗಳನ್ನು ಕಟ್ಟಿದ್ದಾನೆ. ಸ್ವಲ್ಪ ಜಾಸ್ತಿಯೇ ಥ್ರಿಲ್​ ಇರಲಿ ಎಂದು ಕುತ್ತಿಗೆಯ ಭಾಗದಲ್ಲೂ ಹಗ್ಗ ಕಟ್ಟಿದ್ದಾಳೆ. ಅದಾದ ಮೇಲೆ ಬಾತ್​ರೂಂಗೆ ಹೋಗಿದ್ದಾಳೆ.
ಇದನ್ನೂ ಓದಿ:ಗ್ಯಾಂಗ್​ ರೇಪ್​ ಮಾಡಿ ಗುಪ್ತಾಂಗಕ್ಕೆ ಗ್ಲಾಸಿನ ಚೂರು ತುಂಬಿದ ಪಾಪಿಗಳು! ಸಾವು ಬದುಕಿನ ನಡುವೆ ಮಹಿಳೆಯ ಹೋರಾಟ
ಈ ವೇಳೆ ಖುರ್ಚಿ ಸ್ಲಿಪ್​ ಆಗಿದೆ. ತಕ್ಷಣ ಆತನ ಕುತ್ತಿಗೆಯಲ್ಲಿದ್ದ ಹಗ್ಗ ಸಿಕ್ಕಿ ಹಾಕಿಕೊಂಡು, ಬಿಗಿಯಾಗಿದೆ. ಆತ ತಪ್ಪಿಸಿಕೊಳ್ಳಲೂ ಆಗದೆ ಅಲ್ಲಿಯೇ ನರಳಲಾರಂಭಿಸಿದ್ದಾನೆ. ಬಾತ್​ರೂಂನಿಂದ ಹೊರಗೆ ಬಂದ ಮಹಿಳೆಗೆ ಪ್ರಿಯತಮ ನರಳುತ್ತಿರುವ ದೃಶ್ಯ ಕಂಡುಬಂದಿದೆ. ತಕ್ಷಣ ಲಾಡ್ಜ್​ನ ಸಿಬ್ಬಂದಿಯನ್ನು ಕರೆದು ಸಹಾಯ ಕೇಳಿದ್ದಾಳೆ. ಆತನ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಿಚ್ಚುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)
ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
