ಬರೇಲಿ:ಹೆಚ್ಚುತ್ತಿರುವ ಬಿಡಾಡಿ ದನ, ಗೂಳಿಗಳ ದಾಳಿಯಿಂದಾಗಿ ಜನಸಾಮಾನ್ಯರಲ್ಲಿ ತೀವ್ರ ಭಯ ಆವರಿಸಿದ್ದು, ದಿನನಿತ್ಯದ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಬರಲೇಬೇಕು ಎಂಬ ಅನಿವಾರ್ಯತೆ ಇರುವುದರಿಂದ ಹೊರಬರುವ ಜನರಿಗೆ ಇದೀಗ ಭಾರೀ ಸಂಕಷ್ಟ ಎದುರಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿದ ಗೂಳಿ ಆತನನ್ನು ನೆಲಕ್ಕೆ ಕೆಡವಿಕೊಂಡು ಹೊಟ್ಟೆಗೆ ತಿವಿದ ಕಾರಣ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:3 ವರ್ಷಗಳಲ್ಲಿ 1370% ಆದಾಯ: ಷೇರುದಾರರಿಗೆ 3ನೇ ಬಾರಿ ಬಹುಮಾನ ನೀಡಲು ಸಜ್ಜಾಗಿದೆ ಕಂಪನಿ
ಪ್ರಾಣಿಗಳ ಹಿಂಸಾತ್ಮಕ ದಾಳಿಯಲ್ಲಿ ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಡಾಡಿ ದನಗಳ ದಾಳಿ ಸಮಸ್ಯೆಗೆ ಇಲ್ಲಿಯವರೆಗೂ ಉತ್ತರಪ್ರದೇಶ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಜನರು ಆರೋಪಿಸಿದ್ದು, ಇಂತಹದೊಂದು ಘಟನೆ ಮತ್ತೊಮ್ಮೆ ವರದಿಯಾಗಿದೆ.
#उत्तर_प्रदेश#बरेलीके संजय नगर में सुबह मॉर्निंग वॉक पर निकले रिटायर्ड बैंक कर्मचारी को सांड ने जान से मार डाला !!#Bareilly#Bull@bareilly_nn@dmbareilly#viralvideopic.twitter.com/Dyk5P1MeZg
— MANOJ SHARMA LUCKNOW UP🇮🇳🇮🇳🇮🇳 (@ManojSh28986262)January 24, 2024

ಬುಧವಾರ (ಜ.24) ಬೆಳಗ್ಗೆ 8 ಗಂಟೆಗೆ ವೃದ್ಧ ತಮ್ಮ ಮನೆಯಿಂದ ವಾಕಿಂಗ್​ಗೆಂದು ಹೊರಬಂದಾಗ ಈ ಘಟನೆ ಸಂಭವಿಸಿದೆ. ಕಪ್ಪು ಗೂಳಿಯೊಂದು ಏಕಾಏಕಿ ದಾಳಿ ಮಾಡಿದ್ದು, ಅವರ ಹೊಟ್ಟೆಯ ಭಾಗಕ್ಕೆ ಪದೇ ಪದೇ ತಿವಿದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).
150 ಕೋಟಿ ರೂ. ಬಜೆಟ್​ನಲ್ಲಿ 2 ಚಿತ್ರ; ಈ ನಟನ ಮೇಲೆ ಹೆಚ್ಚಾಯ್ತು ಭಾರೀ ನಿರೀಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
