ನವದೆಹಲಿ:ತಿನ್ನುವ ಸ್ಪರ್ಧೆ ಹಲವೆಡೆ ನಡೆಯುತ್ತಿರುತ್ತದೆ. ಯಾರು ಹೆಚ್ಚು ಇಡ್ಲಿ-ರಾಗಿಮುದ್ದೆ ತಿನ್ನುತ್ತಾರೆ ಎಂಬಂಥ ಸ್ಪರ್ಧೆಗಳು ಸರ್ವೇಸಾಮಾನ್ಯ. ಅಂಥದ್ದೇ ಒಂದು ಸ್ಪರ್ಧೆಯಿಂದಾಗಿ ಇಲ್ಲೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈತ ಮೊಮೋಸ್​ಗಳನ್ನು ತಿಂದು ಮರಣ ಹೊಂದಿದ್ದಾನೆ.
ವಿಪಿನ್ ಕುಮಾರ್ ಎಂಬ 25 ವರ್ಷದ ಯುವಕ ತನ್ನ ಸ್ನೇಹಿತರೊಂದಿಗೆ ಪಂಥ ಕಟ್ಟಿ ತಿಂದು ಸಾವಿಗೀಡಾಗಿದ್ದಾನೆ. ಬಿಹಾರದ ಗೋಪಾಲ್​ಗಂಜ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಈತ ಗುರುವಾರ ತನ್ನ ಸ್ನೇಹಿತರೊಂದಿಗೆ ಮೊಮೋಸ್ ತಿನ್ನುವ ವಿಚಾರವಾಗಿ ಬೆಟ್ ಕಟ್ಟಿದ್ದು, ಅತಿಯಾಗಿ ಮೊಮೋಸ್ ತಿಂದು ಅಸ್ವಸ್ಥಗೊಂಡಿದ್ದ. ಅಲ್ಲೇ ಎಚ್ಚರ ತಪ್ಪಿ ಬಿದ್ದು ಸಾವಿಗೀಡಾಗಿದ್ದ.
ಇದನ್ನೂ ಓದಿ:ಆಂಜನೇಯ ದೇವಳದ ಹುಂಡಿಯಲ್ಲಿ ನೇಪಾಳದ ಕರೆನ್ಸಿ; ‘ಸಾಲ ಮಾಡಿದ್ದೇನೆ, ಪರಿಹಾರ ತೋರು’ ಎಂದು ಚೀಟಿ ಬರೆದು ಕೋರಿದ ಭಕ್ತ
ಆದರೆ ಈ ಸಾವಿನ ಹಿಂದೆ ಸ್ನೇಹಿತರ ಷಡ್ಯಂತ್ರ ಇದೆ. ಅವರು ವಿಷಪೂರಿತ ಆಹಾರ ಕೊಟ್ಟು ಬೆಟ್​ ನೆಪದಲ್ಲಿ ತಿನ್ನಿಸಿದ್ದಾರೆ ಎಂದು ವಿಪಿನ್ ತಂದೆ ಆರೋಪಿಸಿದ್ದಾರೆ. ಪೊಲೀಸರು ವಿಪಿನ್ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + 15 =
Remember me
