ಕೋಟಾ:ಆಕ್ಸಿಜನ್ ಮಾಸ್ಕ್‌ಗೆ ಬೆಂಕಿ ತಗುಲಿ ರೋಗಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ವಿಚಿತ್ರ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ.ಮೃತನನ್ನು ಅನಂತಪುರ ತಾಲಾಬ್‌ನ ನಿವಾಸಿ ವೈಭವ್ ಶರ್ಮಾ(23) ಎಂದು ಗುರುತಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಆತನ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.ಇದನ್ನೂ ಓದಿ:ಹುಷಾರ್​…ಗ್ರಾಹಕರಿಗೆ ಸಾಂಬಾರ್​ ನೀಡದಿದ್ದರೆ ನಿಮಗೂ ಬೀಳಬಹುದು ದಂಡಐಸಿಯುನಲ್ಲಿ ವೈಭವ್​​ಗೆ ಡೈರೆಕ್ಟ್ ಕರೆಂಟ್ (ಡಿಸಿ) ಕಾರ್ಡಿಯೋವರ್ಶನ್ ಶಾಕ್ ಟ್ರೀಟ್‌ಮೆಂಟ್ ನೀಡಿದ ನಂತರ ಅವರ ಮುಖದ ಮೇಲಿದ್ದ ಆಕ್ಸಿಜನ್ ಮಾಸ್ಕ್‌ಗೆ ಬೆಂಕಿ ತಗುಲಿದೆ. ಆತನ ಮುಖ ಮತ್ತು ಎದೆಯ ಮೇಲೆ ಸುಟ್ಟ ಗಾಯಗಳಿವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯುವಕನ ಸಾವಿನ ನಂತರ, ಮೃತರ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿಕೊಂಡು ಆಸ್ಪತ್ರೆಯ ಹೊರಗೆ ಧರಣಿ ನಡೆಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ನಂತರ ಧರಣಿಯನ್ನು ಹಿಂಪಡೆಯಲಾಯಿತು.ಇನ್ನು, ರೋಗಿ ಸಾವನ್ನಪ್ಪಿದ ಪ್ರಕರಣವನ್ನು ರಾಜಸ್ಥಾನ ರಾಜ್ಯ ಮಾನವ ಹಕ್ಕುಗಳ ಆಯೋಗವು ಗಮನಕ್ಕೆ ತಂದಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಜಿ.ಕೆ.ವ್ಯಾಸ್ ಅವರು ಘಟನೆಯನ್ನು ಗಂಭೀರ ಎಂದು ವಿವರಿಸಿದ್ದಾರೆ. ಕೋಟಾ ಪೊಲೀಸ್‌ ವರಿಷ್ಠಾಧಿಕಾರಿ, ಕೋಟಾ ಮುಖ್ಯ ಆರೋಗ್ಯ ಅಧಿಕಾರಿ (ಸಿಎಚ್‌ಒ) ಮತ್ತು ಕೋಟಾ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
