ಭಿವಾನಿ:ರಾಮಲೀಲಾ ನಾಟಕದಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್​ ಹೃದಯಾಘಾತದಿಂದ ವೇದಿಕೆಯಲ್ಲಿ ಸಾವನ್ನಪ್ಪಿದ ಘಟನೆ ಹರಿಯಾಣದ ಭಿವಾನಿಯಲ್ಲಿ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಂಬಂಧಿತ ಸಾವುಗಳ ಸಂಖ್ಯೆ ಕ್ರಮೇಣವಾಗಿ ಏರಿಕೆಯಾಗುತ್ತಿರುವುದು ಸದ್ಯ ಎಲ್ಲರಲ್ಲೂ ಭಾರೀ ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಅದರಲ್ಲೂ ಯುವಜನತೆಯಲ್ಲಿ ಈ ಸಮಸ್ಯೆ ಅತೀ ಹೆಚ್ಚಾಗಿ ಕಂಡುಬರುತ್ತಿದೆ.
ಇದನ್ನೂ ಓದಿ:ಮಾಳವಿಕಾ ಅವಿನಾಶ್​ ಸಿನಿಮಾ, ರಾಜಕೀಯದ ಒಳನೋಟ | ವಿಜಯವಾಣಿ ಡಿಜಿಟಲ್ | ಮಾಳವಿಕಾ ಅವಿನಾಶ್​ ಜತೆ ಫೇಸ್​ ಟು ಫೇಸ್
ಘಟನೆಯ ವಿವರ:ಹರಿಯಾಣದ ಭಿವಾನಿಯಲ್ಲಿ ಇಂತಹದೊಂದು ದುರಂತ ಘಟನೆ ಬೆಳಕಿಗೆ ಬಂದಿದ್ದು, ವೇದಿಕೆಯ ಮೇಲೆ ರಾಮಲೀಲಾ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡ ನೋಡುತ್ತಿದ್ದಂತೆ ಹಠಾತ್​ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಸಂಭವಿಸಿದೆ.
हरियाणा के भिवानी में आज प्राण प्रतिष्ठा के मौके पर आयोजित रामलीला में 25 साल में हरीश मेहता हनुमान का रोल निभा रहे थे। उन्हें मंच पर ही दिल का दौरा पड़ा और वे गिर गये। लोगों को लगा कि वे एक्टिंग कर रहे हैं। अस्पताल ले गये। लेकिन महज़ 25 साल के हरीश को बचाया नहीं जा सका।pic.twitter.com/0enH0kjdYF
— Bhadohi Wallah (@Mithileshdhar)January 22, 2024

ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಕಳೆದ 25 ವರ್ಷಗಳಿಂದ ರಾಮಲೀಲಾದಲ್ಲಿ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದರು ಎಂದು ಹೇಳಲಾಗಿದೆ. ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ,(ಏಜೆನ್ಸೀಸ್).
BBKS10: ಟಾಪ್‌ 3ರಲ್ಲಿ ಈ ಮೂವರು ಇರ್ತಾರೆ! ನಮ್ರತಾ ಸೂಚಿಸಿದ ಸ್ಪರ್ಧಿಗಳು ಇವರೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − twelve =
Remember me
