ಭುವನೇಶ್ವರ:ತೆಲಂಗಾಣದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದು, ಕೆಲದಿನಗಳ ಹಿಂದಷ್ಟೇ ತವರು ಒಡಿಶಾದ ಜಗತ್​ಸಿಂಗ್​ಪುರ ಜಿಲ್ಲೆಯಲ ಕಾಟಿಜಂಗಾ ಗ್ರಾಮದ ನಿವಾಸಿ ನಿರ್ಲಿಪ್ತಾ ಭೋಲಾ ಕರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾನೆ. ಪತಿಯ ಸಾವಿನ ಸುದ್ದಿ ತಿಳಿದ ಪತ್ನಿ ಕೂಡ ತನ್ನ ಕೈನ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸುಭದ್ರಾ ಸ್ವೇನ್​ ಆತ್ಮಹತ್ಯೆ ಮಾಡಿಕೊಂಡಾಕೆ. ನಿರ್ಲಿಪ್ತಾ ಮತ್ತು ಸುಭದ್ರಾ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ತೆಲಂಗಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೋವಿಡ್​ ಕಾರಣ ಕೆಲಸವಿಲ್ಲದಂತಾಗಿದ್ದ ಕಾರಣ ದಂಪತಿ ಜೂ.30ರಂದು ತವರಿಗೆ ಹಿಂದಿರುಗಿದ್ದರು.
ಇದನ್ನೂ ಓದಿ:ಕರೊನಾ ಹಿನ್ನೆಲೆ, ಫ್ಯಾನ್ಸ್​ಗೆ ಶಿವಣ್ಣ ಮಾಡಿದ್ದಾರೊಂದು ಮನವಿ..
ತೆಲಂಗಾಣದಿಂದ ಬಂದಿದ್ದ ಕಾರಣ ಇವರಿಬ್ಬರನ್ನೂ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇಬ್ಬರ ಗಂಟಲ ದ್ರವವನ್ನು ಪರೀಕ್ಷಿಸಿದಾಗ ಫಲಿತಾಂಶ ನೆಗೆಟಿವ್​ ಬಂದಿತ್ತು. ಆದರೂ ನಿರ್ಲಿಪ್ತಾ ಅಸ್ವಸ್ಥನಾಗಿದ್ದ. ಜುಲೈ 1ರಂದು ಆತನನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಜು.2ರಂದು ಆತ ಎದೆನೋವು ಎಂದು ಹೇಳಿದ್ದ. ಇದಕ್ಕೆ ಚಿಕಿತ್ಸೆ ನೀಡುವಷ್ಟರಲ್ಲಿ ಆತ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ.
ವಿಷಯ ತಿಳಿದ ಸುಭದ್ರಾ ಆಸ್ಪತ್ರೆಯಲ್ಲೇ ಕೈನ ನರ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಸಕಾಲದಲ್ಲಿ ವೈದ್ಯರು ಆಕೆಯ ನೆರೆವಿಗೆ ದಾವಿಸಿ, ರಕ್ಷಿಸಿದ್ದರು. ಆದರೂ ಚಿಕಿತ್ಸೆ ಫಲಿಸದೆ ಆಕೆಯೂ ಮೃತಪಟ್ಟಳು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಹತ್ಯೆಗೈದ ನನ್ನ ಮಗನನ್ನು ಹೊಡೆದುರುಳಿಸಿ- ಗ್ಯಾಂಗ್​ಸ್ಟರ್ ದುಬೆಯ ಅಮ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 6 =
Remember me
