ನವದೆಹಲಿ:ಮೃಗಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಹೃದಯಾಘಾತದಿಂದ ಪತಿ ಮೃತಪಟ್ಟ ಶಾಕ್​ನಿಂದ ಹೊರಬರಲಾರದ ಪತ್ನಿ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು​ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ದೆಹಲಿ ಬಳಿಯ ಘಾಜಿಯಾಬಾದ್​ನಲ್ಲಿ ನಡೆದಿದೆ.
ಅಭಿಷೇಕ್​ ಅಹ್ಲುವಾಲಿಯ (25) ಮತ್ತು ಅಂಜಲಿ (22) ಮೃತ ದಂಪತಿ. ಪ್ರಾಪರ್ಟಿ ಡೀಲರ್​ ಆಗಿರುವ ಅಹ್ಲುವಾಲಿಯ​, ತನ್ನ ಪತ್ನಿ ಅಂಜಲಿ ಜತೆ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ. ಈ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದ. ಇದರಿಂದ ಗಾಬರಿಗೊಂಡ ಅಂಜಲಿ, ತಕ್ಷಣ ಗಂಡನನ್ನು ಆಸ್ಪತ್ರೆಗೆ ದಾಖಲಿಸಿ, ತನ್ನ ಫ್ರೆಂಡ್ಸ್​ ಮತ್ತು ಕುಟುಂಬವನ್ನು ಸಂಪರ್ಕಿಸಿದಳು.
ಪರೀಕ್ಷೆ ಮಾಡಿದ ವೈದ್ಯರು ಅಹ್ಲುವಾಲಿಯ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಬಳಿಕ ಅಹ್ಲುವಾಲಿಯ ಮೃತದೇಹವನ್ನು ಮನೆಗೆ ತರಲಾಗಿತ್ತು. ಗಂಡನ ಮೃತದೇಹವನ್ನು ನೋಡಿ ಮತ್ತಷ್ಟು ಕುಗ್ಗಿದ ಅಂಜಲಿ, ಮೃತದೇಹದ ಪಕ್ಕ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಈ ವೇಳೆ ಬಾಲ್ಕನಿಗೆ ತೆರಳಿದ ಅಂಜಲಿ, ಘಾಜಿಯಾಬಾದ್​ನ ವೈಶಾಲಿ ಸೆಕ್ಟರ್​ 3ರಲ್ಲಿ ಇರುವ ಎಲ್ಕನ್​ ಅಪಾರ್ಟ್​ಮೆಂಟ್​ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಟ್ಟಡದಿಂದ ಜಿಗಿದು ಗಂಭೀರ ಸ್ಥಿತಿಯಲ್ಲಿದ್ದ ಅಂಜಲಿಯನ್ನು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ವೈದ್ಯರ ಸಲಹೆ ಮೇರೆಗೆ ಎಐಐಎಂಎಸ್‌ಗೆ ಸ್ಥಳಾಂತರ ಮಾಡಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಗಂಭೀರ ಗಾಯಗಳಿಂದ ಅಂಜಲಿ ಅಸುನೀಗಿದಳು.(ಏಜೆನ್ಸೀಸ್​)
ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + six =
Remember me
