ಹರಿಯಾಣ:ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಒಂದರ ಹಿಂದೊಂದರಂತೆ ಸಂಭವಿಸುತ್ತಿರುವುದು ಆತಂಕ ಮೂಡಿಸಿದ್ದು, ಯಾವಾಗ ಯಾರು ಎಲ್ಲಿ ಹೇಗೋ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮೆಡಿಕಲ್ಸ್ ಮುಂಭಾಗ ಎದೆ ಹಿಡಿದುಕೊಂಡೇ ಪ್ರಾಣ ಬಿಟ್ಟಿದ್ದಾನೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.
ಹರಿಯಾಣದ ಫರಿದಾಬಾದ್​ನಲ್ಲಿ ಈ ಪ್ರಕರಣ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ವಿಷಯ ಎಲ್ಲೆಡೆ ಹಬ್ಬಿದೆ. ಇಲ್ಲಿನ ಫಾರ್ಮಸಿಗೆ ಬಂದಿದ್ದ ವ್ಯಕ್ತಿಯೊಬ್ಬ ಔಷಧ ಕೇಳುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಇನ್ನೇನು ಔಷಧ ಪಡೆದು ಹಣ ಪಾವತಿಸಬೇಕು ಎನ್ನುವಷ್ಟರಲ್ಲಿ ಈತ ಮೆಡಿಕಲ್ಸ್​ ಮುಂಭಾಗ ಎದೆಹಿಡಿದುಕೊಂಡೇ ಕುಸಿದು ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ:ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?
ಕೇವಲ ನಾಲ್ಕು ನಿಮಿಷಗಳಲ್ಲಿ ನಡೆದುಹೋದ ಈ ದುರಂತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ತುಣುಕು ವೈರಲ್ ಆಗಿದೆ. ಜ. 4ರಂದು ಈ ಪ್ರಕರಣ ಸಂಭವಿಸಿದೆ. ಉತ್ತರಪ್ರದೇಶ ಮೂಲದ 23 ವರ್ಷದ ಸಂಜಯ್ ಸಾವಿಗೀಡಾದ ವ್ಯಕ್ತಿ. ಈತ ಎದೆಹಿಡಿದುಕೊಂಡು ಬೀಳುವ ಸಂದರ್ಭದಲ್ಲಿ ಮೆಡಿಕಲ್ಸ್​ನ ವ್ಯಕ್ತಿ ಹಿಡಿಯಲು ಹೋಗುವಷ್ಟರಲ್ಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಎಬ್ಬಿಸಿ ಎದ್ದೇಳಿಸಲು ಪ್ರಯತ್ನಿಸಿದರೂ ಅಂಗಡಿಯಾತ ಅದರಲ್ಲಿ ವಿಫಲನಾಗಿದ್ದಾನೆ. –ಏಜೆನ್ಸೀಸ್
मेडिकल स्टोर पर दवा लेते हुए आया#हार्ट-अटैक, चंद मिनट के अंदर हो गई मौत। ये#CCTVफुटेज फरीदाबाद के एक मेडिकल स्टोर की है#Faridabad#heatattckpic.twitter.com/D0MQGIwmNr
— mithilesh yadav (@mithilesh501)January 6, 2023

ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 8 =
Remember me
