ನವದೆಹಲಿ:ವಾಹನ ಚಲಾಯಿಸುವಾಗ ಟ್ರಾಫಿಕ್​ ಪೊಲೀಸ್​ ನಿಲ್ಲಿಸಿ ದಾಖಲೆ ಪರೀಕ್ಷಿಸುವುದು ಸಹಜ. ಆದರೆ ಹೀಗೆ ದಾಖಲೆ ಪರಿಕ್ಷಿಸಲು ಬಂದ ಪೊಲೀಸ್​ನನ್ನೇ 2 ಕಿ.ಮೀ. ಹೊತ್ತೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ಪೊಲೀಸ್​ ಕಾರಿನ ಮುಂದೆ ನಿಂತು ದಾಖಲೆ ಕೇಳಿದ್ದಾರೆ. ಆದರೆ ಈತ ಕಾರು ಚಲಾಯಿಸಿದ್ದಾನೆ. ತಕ್ಷಣ ಪೊಲೀಸ್​ ಕಾರಿನ ಬಾಯ್ನೆಟ್​ ಮೇಲೆ ಹತ್ತಿದ್ದಾರೆ. ಹೀಗೆಯೇ ಕಾರನ್ನು ಚಲಾಯಿಸಿದ್ದಾನೆ ಈ ಭೂಪ.
ಈ ಅವಘಡ ನವೆಂಬರ್​ನಲ್ಲಿ ನಡೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು ಸುನಿಲ್​ ಎಂಬ ಪೊಲೀಸ್​ ಪೇದೆ ಗಾಯಗೊಂಡಿದ್ದಾರೆ.
ನಂಗ್ಲೊಯಿ ಎಂಬಲ್ಲಿ ಪೊಲೀಸ್​ ತಪಾಸಣೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಬಂದ ಈ ಕಾರನ್ನು ಪೊಲೀಸ​ರು ತಡೆದಿದ್ದಾರೆ. ಆದರೆ ಕಾರು ಚಾಲಕ ಕಾರನ್ನು ನಿಲ್ಲಿಸಿದಂತೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಕಾರನ್ನು ತಡೆಯಲು ಪೊಲೀಸ್​ ಸುನಿಲ್​ ಕಾರಿನ ಬಾಯ್ನೆಟ್​ ಮೇಲೆ ಹತ್ತಿದ್ದಾರೆ. ಕಾರನ್ನು ಹಾಗೆಯೇ ಚಲಾಯಿಸಿಕೊಂಡು 2 ಕಿ.ಮೀ. ಸಾಗಿದ್ದಾನೆ ಚಾಲಕ.
ಕಾರಿನಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ಈ ಘಟನೆಯನ್ನು ಮೊಬೈಲ್​ನಲ್ಲಿ ವೀಡಿಯೋ ಮಾಡಿದ್ದಾನೆ. ಪೊಲೀಸ್​ ಪೇದೆ ಕಾರು ನಿಲ್ಲಿಸಲು ಹೇಳಿದಾಗ ಪೊಲೀಸ್​ ಇಳಿಯಲು ಅನುಕೂಲವಾಗುವಂತೆ ನಿಧಾನಗೊಳಿಸಿ, ಪೊಲೀಸ್​ ಇಳಿದ ಮೇಲೆ ಪರಾರಿಯಾಗಿದ್ದಾನೆ.
ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಚಾಲಕನ ವಿರುದ್ಧ ಗುಡುಗಿದ್ದಾರೆ.(ಏಜೆನ್ಸೀಸ್​)
https://twitter.com/desimojito/status/1223946864082309120?s=20
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × one =
Remember me
