ನವ ದೆಹಲಿ:ಅನೇಕ ಜನರು ತಮ್ಮಲ್ಲಿರುವ ವಿಶೇಷವಾದ ಕಲೆಯನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಹಲವು ಮಂದಿ ಅದ್ಭುತವಾಗಿ ಚಿತ್ರ ಕಲಾಕಾರರಿದ್ದಾರೆ. ಚಿತ್ರಕಲೆಯಲ್ಲೂ ಹಲವಾರು ಪ್ರಕಾರಗಳಿವೆ. ಒಂದೊಂದು ಪ್ರಕಾರವೂ ವಿಭಿನ್ನವಾದುದು.
ಚಿತ್ರಕಲಾವಿದರು ಬ್ರಶ್, ಇದ್ದಿಲು, ನೂಲಿನ ಸಹಾಯದಿಂದ ವಾವ್ ಎನಿಸುವಂತಹ ಚಿತ್ರ ಬಿಡಿಸುವುದನ್ನು ನೋಡಿದ್ದೇವೆ. ಇದೀಗ ಇಲ್ಲೊಬ್ಬ ಕಲಾವಿದೆ ಯಾವುದೇ ಪರಿಕರಗಳ ಸಹಾಯವಿಲ್ಲದೆ ತನ್ನ ಎರಡೂ ಕೈಗಳಿಗೆ ಬಣ್ಣ ಹಚ್ಚಿಕೊಂಡು ಅದ್ಭುತವಾಗಿ ಹನುಮಂತನ ಚಿತ್ರ ಬಿಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ಕಲಾವಿದ ಚಮತ್ಕಾರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಲಾವಿದ ಹನುಮಂತನ ಚಿತ್ರ ಬಿಡಿಸಿದ್ದಾರೆ. ಕಲಾವಿದ ತನ್ನ ಎರಡೂ ಕೈಗಳನ್ನೇ ಬ್ರಶ್​ಗಳಾಗಿ ಬಳಸಿಕೊಂಡಿರುವುದು ವಿಶೇಷ. ಯಾವುದೇ ಪೈಟಿಂಗ್ ಬ್ರಶ್​​ಗಳ ಸಹಾಯವಿಲ್ಲದೆ ಚಿತ್ರ ಬಿಡಿಸಿರುವುದು ವಿಶೇಷ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅತ್ಯಂತ ಕಡಿಮೆ ಸಮಯದಲ್ಲಿ 1.5 ಲಕ್ಷಕ್ಕಿಂತಲೂ ಅಧಿಕ ಜನರು ಕಲಾವಿದನ ಚಮಾತ್ಕಾರವನ್ನು ವೀಕ್ಷಿಸಿದ್ದಾರೆ. ಜತೆಗೆ ಹನುಮಂತ ಆಶೀರ್ವಾದ ನಿಮ್ಮ ಮೇಲಿದೆ. ಹೀಗಾಗಿ ಇಂತಹ ಅದ್ಭುತ ಚಿತ್ರ ನಿಮ್ಮಿಂದ ಮೂಡಿ ಬರಲು ಸಾಧ್ಯವಾಯಿತು ಎಂದು ಅನೇಕ ಜನರು ಕಮೆಂಟ್ ಮಾಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twenty =
Remember me
