ನವ ದೆಹಲಿ:ಬಿಸಿ ಬಿಸಿ ಚಹಾದೊಂದಿಗೆ, ಬಿಸಿಬಿಸಿ ಪಕೋಡಾ ತಿಂತಾ ಇದ್ರೆ ಸಮಯ ಕಳೆದದ್ದೇ ಗೊತ್ತಾಗೋದಿಲ್ಲ. ಹೀಗಾಗಿ ಸಂಜೆಯ ಹೊತ್ತಲ್ಲಿ ಪಕೋಡಾಗಳಿಗೆ ಭಾರೀ ಡಿಮ್ಯಾಂಡ್. ನಾವಿಂದು ವೆರೈಟಿ ಪಕೋಡಾಗಳನ್ನು ಸವಿಯಬಹುದು. ಫುಡ್​ ಸ್ಟ್ರೀಟ್​ಗೆ ಹೋದರೆ ಗೊಂದಲ ಆಗಿ ಬಿಡ್ತೀವಿ. ಯಾವ ವೆರೈಟಿ ಪಕೋಡಾ ತಿನ್ನುವುದೆಂದು. ಅಷ್ಟು ವಿಭಿನ್ನವಾದ ಪಕೋಡಾಗಳಿವೆ.
ವಿವಿಧ ತರಕಾರಿಗಳ ಪಕೋಡ ಸವಿದಿದ್ದೇವೆ. ಆದರೆ, ಇಲ್ಲೊಬ್ಬರು ಮಹಿಳೆ ತಳ್ಳೋಗಾಡಿಯಲ್ಲಿ ವೆರೈಟಿ ಪಕೋಡಾ ಮಾರಾಟ ಮಾಡ್ತಿದ್ದಾರೆ. ಆ ಪಕೋಡಾ ಯಾವ್ದಪ್ಪಾ ಅಂದ್ರೆ, ಚಾಕೋಲೇಟ್ ಪಕೋಡಾ. ಆಶ್ಚರ್ಯ ಆದ್ರೂ, ನಂಬಲೇಬೇಕು. ಇದೀಗ ಈ ಮಹಿಳೆ ಬಿಸಿಬಿಸಿ ಚಾಕೋಲೇಟ್ ಪಕೋಡಾ ಮಾಡಿ ಮಾರಾಟ ಮಾಡ್ತೀರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿಡಿಯೋ ನೋಡಿದ ಆಹಾರಪ್ರಿಯರು ತಾವೂ ಕೂಡಾ ಚಾಕೋಲೇಟ್​ ಪಕೋಡಾ ಮಾಡೋದಕ್ಕೆ ಸಜ್ಜಾಗ್ತಿದ್ದಾರೆ.
ರಸ್ತೆ ಬದಿ ಮಹಿಳೆಯೊಬ್ಬರು ತಳ್ಳೋಗಾಡಿಯಲ್ಲಿ ಪಕೋಡಾ ಮಾಡಿ ಮಾರಾಟ ಮಾಡ್ತಿದ್ದಾರೆ. ಮೊದಲು ಚಾಕೋಲೇಟನ್ನು ಪಕೋಡಾ ಹಿಟ್ಟಿನೊಂದಿಗೆ ಎಣ್ಣೆಗೆ ಬಿಟ್ಟಿದ್ದಾರೆ. ಎಣ್ಣೆಯಲ್ಲಿ ಫ್ರೈ ಮಾಡಿ ಗ್ರಾಹಕರಿಗೆ ಸವಿಯಲು ನೀಡಿದ್ದಾರೆ. ಚಾಕೋಲೇಟ್ ಪಕೋಡಾ ಮಾಡುವ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ 1 ಲಕ್ಷ ಜನರು ವೀಕ್ಷಿಸಿದ್ದಾರೆ.
ಇತರೆ ಪಕೋಡಾಗಳಂತೆ ಗರಿಗರಿಯಾಗಿ ಚಾಕೋಲೇಟ್ ಪಕೋಡಾವನ್ನು ಸವಿಯಲು ಸಾಧ್ಯವಾಗುತ್ತದೆ. ಸ್ವಲ್ಪ ಖಾರವಾದ ಹಸಿರು ಚಟ್ನಿಯೊಂದಿಗೆ ಪಕೋಡಾ ಸೇವಿಸಿದಾಗ ಇದರ ರುಚಿ ಇನ್ನಷ್ಟು ಹೆಚ್ಚಿಸಬಹುದು ಎಂದು ವಿಡಿಯೋ ಅಪ್ಲೋಡ್ ಮಾಡಿರುವ ಆರ್.ಜೆ ರೋಹನ್ ಹೇಳಿದ್ದಾರೆ.(ಏಜೆನ್ಸೀಸ್)\


A post shared by RJ Rohan (@radiokarohan)

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven − five =
Remember me
