ನವದೆಹಲಿ:ಹಣಕಾಸಿನ ಸಮಸ್ಯೆಯಿಂದ ಸಂಸಾರವನ್ನು ನಡೆಸಲಾಗದೆ ಮನನೊಂದಿದ್ದ ವ್ಯಕ್ತಿಯೊರ್ವ ಹೆಂಡತಿ, ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯ ವಿಪಿನ್ ಗಾರ್ಡನ್​ ಬಳಿ ನಡೆದಿದೆ.
ಸುನಿತಾ (35), ನಾಲ್ಕು ವರ್ಷದ ಮಗ ಹಾಗೂ ನಾಲ್ಕು ತಿಂಗಳ ಹಸುಳೆ ಮೃತರು. ರಾಜೇಶ್ ತೀವ್ರವಾದ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದನು. ಹೀಗಾಗಿ ಪತ್ನಿ, ಮಕ್ಕಳು ಮಲಗಿದ್ದಾಗ ಅವರಿಗೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ತಾನೂ ಆತ್ಮಹತ್ಯಗೆ ಮುಂದಾಗಿದ್ದಾನೆ. ಈತನ ಕೈಗೆ ಗಾಯವಾದ ಕಾರಣ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ; ಸೊಸೆಗೆ ಆ್ಯಸಿಡ್ ಕುಡಿಸಿ ಕೊಂದ ಅತ್ತೆ
ಜನರಲ್ ಸ್ಟೋರ್ ನಡೆಸುತ್ತಿದ್ದ ರಾಜೇಶ್, ಇಂದು ಮುಂಜಾನೆ ತನ್ನ ಆರ್ಥಿಕ ಸಮಸ್ಯೆಯ ಬಗ್ಗೆ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದ. ಘಟನೆ ನಡೆದಾಗ ರಾಜೇಶ್‍ನ ತಂದೆ ತಾಯಿ ಬೇರೊಂದು ಕೋಣೆಯಲ್ಲಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮದುವೆ ಊಟ ಸೇವಿಸಿ 43 ಮಂದಿ ಅಸ್ವಸ್ಥ: ವಾಂತಿ,ಭೇದಿಯಿಂದ ಆಸ್ಪತ್ರೆಗೆ ದಾಖಲು
ಸುನಿತಾರನ್ನು 2015ರಲ್ಲಿ ಮದುವೆಯಾಗಿದ್ದ ರಾಜೇಶ್, ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ನಂತರ ಆಸ್ತಿಗಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಎಂದು ಮೃತ ಸುನಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪತ್ನಿಯನ್ನು ಕೊಂದು ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟ ಪತಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 12 =
Remember me
