ಅಗರ್​ಮಾಲ್ವಾ:ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ತಂದೆಯೊಬ್ಬ ಹತ್ಯೆಗೈದು ಗೋಣಿ ಚೀಲದಲ್ಲಿ ತುಂಬಿರುವ ಘಟನೆ ಮಧ್ಯಪ್ರದೇಶದ ಅಗರ್​ಮಾಲ್ವಾ ಎಂಬಲ್ಲಿ ನಡೆದಿದೆ.ಇದನ್ನೂ ಓದಿ:ಆ್ಯಪ್​ ಮೂಲಕ ಕಾರ್​ ಬುಕ್: ಬಾಡಿಗೆ ನೆಪದಲ್ಲಿ ಕೊಂಡೊಯ್ದು ಜಿಪಿಎಸ್​ ಕಿತ್ತು ಹಾಕಿ ಆರೋಪಿಗಳು ಎಸ್ಕೇಪ್..
ಮೃತರನ್ನು ನಂದ್ರಾಂ ಗುರ್ಜರ್ ಮತ್ತು ಗೋವಿಂದ್ ಗುರ್ಜಾರ್ ಎಂದು ಗುರುತಿಸಲಾಗಿದ್ದು, ಇಬ್ಬರ ಯುವಕ ಮೃತದೇಹಗಳು ತೋಟದ ಮನೆಯೊಂದರಲ್ಲಿ ಪತ್ತೆಯಾಗಿವೆ. ಈ ಕುರಿತು ಮೆಹರ್ಬಾನ್ ಸಿಂಗ್ ಮತ್ತು ಈಶ್ವರ್ ಎಂಬ ಮತ್ತೊಬ್ಬ ಶಂಕಿತನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.ಬಳಿಕ ತನಿಖೆ ವೇಳೆ ಮೆಹರ್ಬಾನ್ ಸಿಂಗ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕೃತ್ಯವೆಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಶನಿವಾರದಂದು ಆತ ಇಬ್ಬರು ಯುವಕರು ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ತನ್ನ ವಾಹನದಿಂದ ಡಿಕ್ಕಿ ಹೊಡೆದಿದ್ದಾನೆ. ಆ ಬಳಿಕ ಇಬ್ಬರು ನೆಲಕ್ಕೆ ಬಿದ್ದಿದ್ದು, ಅವನು ಅವರನ್ನು ತನ್ನ ತೋಟಕ್ಕೆ ಎಳೆದುಕೊಂಡು ಹೋಗಿ ಇಬ್ಬರಿಗೆ ಮನಬಂದಂತೆ ದೊಣ್ಣೆಯಿಂದ ಥಳಿಸಿದ್ದಾನೆ.
ಇದನ್ನೂ ಓದಿ:ಬೆಳಿಗ್ಗೆ ಕಸ ಗುಡಿಸುವ ವೇಳೆ ದುರಂತ: ಮಹಿಳೆಯ ಪ್ರಾಣ ತೆಗೆದ ಮಂಗಗಳ ಗುಂಪು..?ಪರಿಣಾಮವಾಗಿ ಯುವಕರು ಮೃತಪಟ್ಟಿದ್ದು, ಆ ಬಳಿಕ ಅವರ ಮೃತದೇಹಗಳನ್ನು ಗೋಣಿ ಚೀಲದಲ್ಲಿ ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈತನ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳದಲ್ಲಿ ಮೋಟಾರ್‌ ಸೈಕಲ್, ಆರೋಪಿಯ ನಾಲ್ಕು ಚಕ್ರದ ವಾಹನ ಹಾಗೂ ಅಪರಾಧ ನಡೆದ ಸ್ಥಳದಲ್ಲಿ ಚೀಲಗಳು ಕಂಡು ಬಂದಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
