ಹೈದರಾಬಾದ್: ಪತ್ನಿ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​​ನಲ್ಲಿ ನಡೆದಿದೆ.
ಇದನ್ನೂ ಓದಿ:ರಾಜಸ್ಥಾನದಿಂದ ಬೆಂಗಳೂರಿಗೆ ಕೊರಿಯ‌ರ್​ ಮುಖಾಂತರ ಮಾದಕ ವಸ್ತು ಸಾಗಾಟ; 60 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ
ಎಂ.ವೆಂಕಟ್ ರೆಡ್ಡಿ(38) ಮೃತ ವ್ಯಕ್ತಿಯಾಗಿದ್ದು, ನಗರದ ಕುಶೈಗುಡಾ ಪ್ರದೇಶದ ನಿವಾಸಿಯಾಗಿದ್ದಾನೆ. ತನ್ನ ಪತ್ನಿ ಮತ್ತು ಆಕೆಯ ಪೋಷಕರು ಆತನನ್ನು ನಿಂದಿಸಿದ ನಂತರ ಕೀಟನಾಶಕ ಸೇವಿಸಿದ್ದಾನೆ.
ವೆಂಕಟ್ ರೆಡ್ಡಿಯು ತನ್ನ ತಾಯಿ, ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದನು. ಆದರೆ ಕಲ್ಯಾಣಿಗೆ ತನ್ನ ಅತ್ತೆಯ ಜತೆ ಇರಲು ಮನಸ್ಸಿರಲಿಲ್ಲ. ಈ ಕಾರಣದಿಂದಾಗಿ ಸಂಸಾರದಲ್ಲಿ ಆಗಾಗ ಕಲಹವಾಗುತ್ತಿತ್ತು, ಜತೆಗೆ ತನ್ನ ತಾಯಿಯನ್ನು ಬೇರೆ ಸ್ಥಳಕ್ಕೆ ಕಳುಹಿಸುವಂತೆ ಆಕೆ ಮತ್ತು ಆಕೆಯ ಪೋಷಕರು ವೆಂಕಟ್​ಗೆ ಒತ್ತಾಯಿಸುತ್ತಿದ್ದರು.
ಇದನ್ನೂ ಓದಿ:ಬೆಂ-ಮೈ ಹೆದ್ದಾರಿಯಲ್ಲಿ 100 ಕಿ.ಮೀ ವೇಗ ದಾಟಿದರೆ ದಂಡ: ಪರಿಶೀಲಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ
ಎರಡು ತಿಂಗಳ ಹಿಂದೆ, ಕಲ್ಯಾಣಿ ವಾರಂಗಲ್‌ನಲ್ಲಿರುವ ಪೋಷಕರ ಮನೆಗೆ ಹೋಗಿದ್ದಳು, ಜುಲೈ 2ರಂದು ಪೋಷಕರೊಂದಿಗೆ ವೆಂಕಟ್ ರೆಡ್ಡಿ ಮನೆಗೆ ಬಂದ ಪತ್ನಿ ಜಗಳವಾಡಿ ಆಸ್ತಿಯನ್ನು ಇಬ್ಬರು ಹೆಣ್ಣು ಮಕ್ಕಳ ಹೆಸರಿಗೆ ಬರೆದುಕೊಡುವಂತೆ ಹಾಗೂ ತಾಯಿಗೆ ಪ್ರತ್ಯೇಕವಾಗಿ ವಾಸಿಸಲು ಮನೆ ಮಾಡಿ ಕೊಡುವಂತೆ ಕೂಗಾಡಿದ್ದಾರೆ.
ಆಗ, ವೆಂಕಟ್​​ ಜೋರಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದ್ದು, ಅವರು ಆತನ ಮಾತನ್ನು ನಿರ್ಲಕ್ಷಿಸಿದ್ದಾರೆ. ಕೊನೆಗೆ ಆತ ಈ ರೀತಿ ವರ್ತಿಸಿದರೆ ತಾನು ತನ್ನ ಜೀವನವನ್ನು ಕೊನೆಗೊಳಿಸುತ್ತೇನೆ ಎಂದಿದ್ದಾನೆ. ಆಗ ಅವರು ಆತನಿಗೆ ಲೇವಡಿ ಮಾಡಿದ್ದಾರೆ. ಅವಮಾನ ಅನುಭವಿಸಿದ ವೆಂಕಟ್ ಜೂನ್​ 2ರಂದು ಕ್ರಿಮಿನಾಶಕ ಸೇವಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಜೂನ್​ 5ರಂದು ಮೃತಪಟ್ಟಿದ್ದಾನೆ. ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
