ಗೋರಖ್‌ಪುರ:ಮನೆಯ ಬಳಿ ಜೋರಾಗಿ ಸಂಗೀತ ಹಾಕಿದ ಬಗ್ಗೆ ತಕರಾರು ನೀಡಿದ ನಂತರ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಗೋರಖ್​​ಪುರ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಮನೆಯ ಬಾತ್​ರೂಮ್​​ನಲ್ಲಿ 15ಕ್ಕೂ ಹೆಚ್ಚು ನಾಗರಹಾವಿನ ಮರಿ ಪ್ರತ್ಯಕ್ಷ: ವೃದ್ಧ ದಂಪತಿ ಕಂಗಾಲುಮೃತನನ್ನು ರುದೌಲಿ ಗ್ರಾಮದ ನಿವಾಸಿ ರಾಜ್ ಕಿಶೋರ್ (45) ಎಂದು ಗುರುತಿಸಲಾಗಿದ್ದು, ಸುನೀಲ್ ಯಾದವ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಗಣಿಗಾರಿಕೆಯ ಕಾರ್ಮಿಕನಾದ ಸುನೀಲ್​, ಮೃತನ ಮನೆ ಬಳಿ ಟ್ರ್ಯಾಕ್ಟರ್​​ನಲ್ಲಿ ಅಶ್ಲೀಲ ಸಂಗೀತವನ್ನು ಹಾಕಿ ಜೋರಾಗಿ ಸೌಂಡ್​ನ್ನು ಇಟ್ಟಿದ್ದ. ಇದಕ್ಕೆ ಕಿಶೋರ್ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವ ನಡುವೆ ವಾಗ್ವಾದ ನಡೆದಿದೆ.ಒಂದು ಗಂಟೆ ನಂತರ ಆರೋಪಿಯು ಐದಾರು ಗಣಿಗಾರಿಕೆ ಕಾರ್ಮಿಕರೊಡನೆ ಸೇರಿ ಕಿಶೋರ್​ ಹಾಗೂ ಆತನ ಮನೆಯವರ ಮೇಲೆ ಹಲ್ಲೆ ನಡೆಸಿದ್ದು, ಮಾತಿನ ಚಕಮಕಿಯ ನಡುವೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿದ ಗ್ರಾಮದ ನಿವಾಸಿಗಳು ಹೊರಗೆ ಬಂದು ಆರೋಪಿಗಳನ್ನು ಬೆನ್ನಟ್ಟಿದ್ದು ಸ್ಥಳದಿಂದ ಅವರು ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
