ದೆಹಲಿ:ವ್ಯಕ್ತಿಯೊಬ್ಬ ಮಹಿಳೆಗೆ 70 ಸಾವಿರ ರೂ ನೀಡಿ. ಆಕೆಯೊಂದಿಗೆ ವಿವಾಹವಾಗಿದ್ದು, ನಂತರ ಆಕೆಯ ನಡವಳಿಕೆ ಇಷ್ಟವಾಗದ ಕಾರಣ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.ಇದನ್ನೂ ಓದಿ:ಮ್ಯೂಸಿಕ್​ ಕಂಪನಿಗೆ ನುಗ್ಗಿ ಉದ್ಯಮಿಯ ಅಪಹರಣ: ಶಾಸಕನ ಪುತ್ರ ಸೇರಿ ಹಲವರ ವಿರುದ್ಧ ಎಫ್​ಐಆರ್​ಸ್ವೀಟಿ ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿ ಧರಂವೀರ್ ಮತ್ತು ಅರುಣ್, ಸತ್ಯವಾನ್ ಎಂಬುವರನ್ನು ಬಂಧಿಸಲಾಗಿದೆ. ಪತಿ ಧರಂವೀರ್ ಈಕೆಯನ್ನು ಮದುವೆಯಾಗಲು 70,000 ರೂ ಪಾವತಿಸಿದ್ದು, ಸಂತ್ರಸ್ತೆಯ ಪೋಷಕರು ಅಥವಾ ಕುಟುಂಬದಸ್ಥರ ಬಗ್ಗೆ ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ.ಶನಿವಾರದಂದು ಫತೇಪುರ್ ಬೆರಿಯ ಜೀಲ್ ಖುರ್ದ್ ಗಡಿಯ ಸಮೀಪವಿರುವ ಕಾಡಿನಲ್ಲಿ ಸ್ವೀಟಿಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಅದೇ ಮಾರ್ಗದಲ್ಲಿ ಚಲಿಸಿದ್ದ ಹಲವಾರು ವಾಹನಗಳ ಪೈಕಿ, ಬೆಳಗಿನ ಜಾವ 1.40ರ ಸುಮಾರಿಗೆ ಆಟೋರಿಕ್ಷಾವೊಂದರ ಚಲನವಲನ ಅನುಮಾನಾಸ್ಪದವಾಗಿ ಕಂಡು ಬಂದಿತ್ತು.ಬಳಿಕ ಆಟೋರಿಕ್ಷಾದ ಮಾರ್ಗ, ಮೃತದೇಹದ ಬಗ್ಗೆ ಹೆಚ್ಚಿನ ವಿವರ ಪತ್ತೆಹಚ್ಚಿದ ನಂತರ ಪೊಲೀಸರು ಅದರ ನೋಂದಣಿ ಸಂಖ್ಯೆಯನ್ನು ಗಮನಿಸಿ, ಛತ್ತರ್‌ಪುರ ನಿವಾಸಿಯಾದ ಚಾಲಕ ಅರುಣ್‌ನನ್ನು ಗದೈಪುರ ಬ್ಯಾಂಡ್ ರಸ್ತೆಯ ಬಳಿ ಬಂಧಿಸಿದ್ದರು. ತನಿಖೆ ಆತ ತನ್ನ ಸೋದರ ಮಾವ ಧರಮ್‌ವೀರ್ ಮತ್ತು ಸತ್ಯವಾನ್ ಇಬ್ಬರೂ ನಂಗ್ಲೋಯ್ ನಿವಾಸಿಗಳು ಸ್ವೀಟಿಯನ್ನು ಹರಿಯಾಣದ ಗಡಿಯ ಸಮೀಪದಲ್ಲಿ ಕತ್ತು ಹಿಸುಕಿ ಕೊಲೆಗೈದು ಶವವನ್ನು ಕಾಡಿನಲ್ಲಿ ಎಸೆದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ.ಇದನ್ನೂ ಓದಿ:ಒಂದೇ ಭಾವಚಿತ್ರ ಬಳಸಿ 658 ಸಿಮ್​ ವಿತರಣೆ: ಎಲ್ಲೆಂದರಲ್ಲಿ ಫೋಟೋ ಕೊಡುವ ಮುನ್ನ ಎಚ್ಚರ..ಇನ್ನೊಂದೆಡೆ ಮೃತ ಮಹಿಳೆಯ ನಡೆ ನಿಗೂಢವಾಗಿದ್ದು, ಆಕೆ ತಿಂಗಳಾನುಗಟ್ಟಲೆ ಯಾರಿಗೂ ಹೇಳದೆ ಮನೆಯಿಂದ ಹೊರ ಹೋಗುತ್ತಿದ್ದಳು. ಇದರಿಂದಾಗಿ ಧರ್ಮವೀರ್ ತನ್ನ ಪತ್ನಿಯ ವರ್ತನೆಯಿಂದ ಅತೃಪ್ತಿ ಹೊಂದಿದ್ದ. ಅಲ್ಲದೇ, ಆರೋಪಿಗಳ ಪ್ರಕಾರ, ಸ್ವೀಟಿ ತನ್ನ ಹೆತ್ತವರು ಅಥವಾ ಇತರ ಕುಟುಂಬ ಸದಸ್ಯರ ಬಗ್ಗೆ ಏನು ಮಾಹಿತಿಯನ್ನು ನೀಡಿರಲಿಲ್ಲ. ಆಕೆ ಬಿಹಾರದ ಪಾಟ್ನಾದವಳು ಎನ್ನಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಫತೇಪುರ್ ಬೆರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಗೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆ ತನ್ನ ಗಂಡನ ಮನೆಯನ್ನು ತೊರೆದ ನಂತರ ಎಲ್ಲಿಗೆ ಹೋಗುತ್ತಿದ್ದಳು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 4 =
Remember me
