ತಿರುವನಂತಪುರಂ:ರಸ್ತೆ ಸುರಕ್ಷತೆಗಾಗಿ ಕೇರಳ ಸರ್ಕಾರ ಅಳವಡಿಸಿರುವ ಕ್ಯಾಮರಾ ಇದೀಗ ಫಜೀತಿ ಒಂದನ್ನು ತಂದಿದ್ದು ಒಬ್ಬರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದೆ.
ಅನ್ಯ ಮಹಿಳೆಯೊಂದಿಗೆ ತಮ್ನ ಪತಿ ಹೆಲ್ಮೆಟ್ ಧರಿಸದೆ ಗಾಡಿಯಲ್ಲಿ ಓಡಾಡುತ್ತಿರುವ ಫೋಟೋವನ್ನು ಸಂಚಾರಿ ಪೊಲೀಸರು ಆತನ ಮನೆಗೆ ಕಳುಹಿಸಿದ್ದು ಈಗ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ.
ತಿರುವನಂತಪುರಂ ಸಂಚಾರಿ ಪೊಲೀಸರು ಹೆಲ್ಮೆಟ್​ ಧರಿಸದೆ ವ್ಯಕ್ತಿ ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಜೊತೆಗಿದ್ದ ಫೋಟೋವನ್ನು ಪೊಲೀಸರು ಅಪ್ಲೋಡ್​ ಮಾಡಿದ್ದು ದಂಡ ಕಟ್ಟುವಂತೆ ಮನೆಗೆ ಚಲನ್​ ಕಳುಹಿಸಿದ್ಧಾರೆ.
ಪರಸ್ತ್ರೀಯೊಂದಿಗೆ ಸುತ್ತಾಡುತ್ತಿರುವ ವಿಚಾರ ತಿಳಿದ ಪತ್ನಿ ನೇರ ಠಾಣೆ ಮೆಟ್ಟಿಲೇರಿದ್ದು ಪತಿ ವಿರುದ್ಧ ದೂರು ನೀಡಿದ್ಧಾಳೆ ಮತ್ತು ಪೊಲೀಸರು ಆತನನ್ನು ಬಂಧಿಸಿದ್ಧಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಟಾಂಗ್​ ಕೊಟ್ಟ ದೆಹಲಿ ಪೊಲೀಸರು
ಇಡುಕ್ಕಿ ನಿವಾಸಿಯಾದ ವ್ಯಕ್ತಿಯೂ ಏಪ್ರಿಲ್​ 25ರಂದು ತಿರುವನಂತಪುರದ ರಸ್ತೆಗಳಲ್ಲಿ ತನ್ನ ಗೆಳತಿಯೊಂದಿಗೆ ಹೆಲ್ಮೆಟ್​ ಧರಿಸದೆ ಅಡ್ಡಾಡಿದ್ದ.
ಗಾಡಿ ಹೆಂಡತಿಯ ಹೆಸರಿನಲ್ಲಿದ್ದ ಕಾರಣ ದಂಡ ಪಾವತಿದಸುವಂತೆ ಚಲನ್​ಗಳನ್ನು ಮನೆಗೆ ಪೋಸ್ಟ್​ ಮೂಲಕ ಕಳುಹಿಸಿದ್ದಾರೆ. ತನ್ನ ಪತಿ ಜೊತೆ ವೇರೊಂದು ಮಹಿಳೆ ಇದ್ದದನ್ನು ನೋಡಿದ ಪತ್ನಿ ಅಘಾತಕ್ಕೊಳಗಾಘಿದ್ದು ಆಕೆ ಯಾರೆಂದು ಪ್ರಶ್ನಿಸಿದ್ದಾಳೆ.
ಪತ್ನಿಯ ಪ್ರಶ್ನೆಗೆ ತಬ್ಬಿಬ್ಬುಗೊಂಡ ಪತಿ ಆ ಮಹಿಳೆಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಾನು ಅವರಿಗೆ ಲಿಫ್ಟ್​ ಕೊಟ್ಟಿದ್ದೇನೆ ಅಷ್ಟೇ ಎಂದು ಹೇಳಿ ನಂಬಿಸಲು ಮುಂದಾಗಿದ್ದಾನೆ.
ಪತಿ ನೀಡಿದ ಜವಾಬಿಗೆ ಸಮಾಧಾನಗೊಳ್ಳದ ಪತ್ನಿ ಜಗಳವಾಡಿ ಅಂತಿಮವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ತನ್ನ ಹಾಗೂ 3 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − two =
Remember me
