ಉತ್ತರಪ್ರದೇಶ:ಮಹಿಳೆಯನ್ನು ಮದುವೆಯಾಗಬೇಕೆಂಬ ಆಸೆಯಿಂದ ತನ್ನ ಗುರುತನ್ನು ಮರೆಮಾಚಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಕುಶಿನಗರದ ವ್ಯಕ್ತಿಯೊಬ್ಬನನ್ನು ಇದೀಗ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ತಬ್ರೇಜ್ ಆಲಂ ಎಂದು ಗುರುತಿಸಲಾಗಿದೆ. ಮೂರು ಗಂಟು ಹಾಕಲೆಂದು ಮೂರಕ್ಕೂ ಹೆಚ್ಚು ಸುಳ್ಳು, ನಕಲಿ ಐಡಿಯಾಗಳನ್ನು ಪ್ರಯೋಗಿಸಿದ ಈತನ ಕಿಡಿಗೇಡಿ ಕೆಲಸವನ್ನು ಸದ್ಯ ಪೊಲೀಸರು ಬಟಾಬಯಲು ಮಾಡಿದ್ದೇ ರೋಚಕ.
ಇದನ್ನೂ ಓದಿ:ರೂ 1,886 ರಿಂದ 20ಕ್ಕೆ ಕುಸಿದಿರುವ ಖಾಸಗಿ ಬ್ಯಾಂಕ್​ ಷೇರು ಬೆಲೆ: ಈಗ ಒಂದೇ ದಿನದಲ್ಲಿ 12% ಏರಿಕೆ ಏಕೆ?
ತಬ್ರೇಜ್ ಆಲಂ ಎಂಬಾತ ತನ್ನ ಮೂಲ ಹೆಸರನ್ನೇ ಮರೆಮಾಚಿ, ಆರ್ಯನ್ ಪ್ರಸಾದ್ ಎಂದು ನಕಲಿ ಹೆಸರನ್ನು ಇಟ್ಟುಕೊಂಡು, ಮಹಿಳೆಯೊಬ್ಬಳಿಗೆ ವಂಚಿಸಿದ್ದಾನೆ ಎಂದು ಗೋರಖ್‌ಪುರ ಪೊಲೀಸ್ ಇನ್ಸ್‌ಪೆಕ್ಟರ್ ಮಹಿಳೆ ನೀಡಿದ ಮಾಹಿತಿಯನ್ನು ಇದೀಗ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
ತಬ್ರೇಜ್ ಆಲಂ ಮಹಿಳೆಯೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದ, ಈ ವಿಷಯ ಆಕೆಯ ಕುಟುಂಬಕ್ಕೆ ಗೊತ್ತಾಗಿದೆ. ಈ ಬೆನ್ನಲ್ಲೇ ಮೊದ ಮೊದಲು ಮನೆಯಲ್ಲಿ ಇವರಿಬ್ಬರ ವಿವಾಹಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ತದನಂತರ ಮಹಿಳೆಯ ಕುಟುಂಬವು ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದರು.
ಇದನ್ನೂ ಓದಿ:ಹೇಮಾವತಿ ನದಿ ನೀರಿಗಾಗಿ ಭುಗಿಲೆದ್ದ ಆಕ್ರೋಶ:ರೇವಣ್ಣ ನೇತೃತ್ವದಲ್ಲಿ ಡಿಸಿ ಕಚೇರಿಯ ಎದುರು ಪ್ರತಿಭಟನೆ
ಇದರ ಬೆನ್ನಲ್ಲೇ ಇದೇ ಫೆಬ್ರವರಿ 25ರಂದು ಮದುವೆ ನಿಶ್ಚಯಿಸಲಾಗಿತ್ತು. ಅಂದುಕೊಂಡಂತೆಯೇ ನಡೆಯಬೇಕಿತ್ತು. ಆದರೆ, ಸತ್ಯ ಯಾವತ್ತಿದ್ದರೂ ಹೊರಗೆ ಬರಲೇಬೇಕು ಎನ್ನುವಂತೆ ತಬ್ರೇಜ್ ಆಲಂನ ಎಲ್ಲಾ ಸುಳ್ಳುಗಳು ಮದುವೆ ಮಂಟಪದಲ್ಲಿ ಬಟಾಬಯಲಾಗಿದೆ. ಹುಡುಗ ಕುಟುಂದದಿಂದ ವಧುಗೆ ಚಿನ್ನದ ಆಭರಣ ಮತ್ತು ವಸ್ತ್ರವನ್ನು ಕೊಡಬೇಕಿತ್ತು. ಹೀಗಿರುವಾಗ ಮದುವೆಗೆ ರಾಯಲ್ ಆಗಿ ಅಲಂಕೃತ ಕಾರಿನಲ್ಲಿ ಎಂಟ್ರಿ ಕೊಟ್ಟ ತಬ್ರೇಜ್​, ಅಸಲಿ ಚಿನ್ನದ ಬದಲಿಗೆ ನಕಲಿ ಗೋಲ್ಡ್​ ಕೊಟ್ಟಿರುವುದು ವಧು ಕುಟುಂಬದವರಿಂದ ಪತ್ತೆಯಾಗಿದೆ.
ವಧುವಿನ ಮನೆಯವರು ಚಿನ್ನಾಭರಣ ನಕಲಿ ಎಂದು ಸ್ಥಳದಲ್ಲೇ ಶಂಕಿಸಿದ್ದು, ಅದನ್ನು ಸ್ಥಳದಲ್ಲೇ ಚುರುಕಾಗಿ ಪರಿಶೀಲಿಸಿದ್ದಾರೆ. ಅನುಮಾನಗಳು ದೃಢಪಟ್ಟಿವೆ. ಈ ಘಟನೆ ಬೆಳಕಿಗೆ ಬರುತ್ತಿದಂತೆ ವಿವಾದ ಭುಗಿಲೆದ್ದಿದೆ. ಮಾತಿಗೆ ಮಾತು ಬೆಳೆದು ಜಟಾಪಟಿ ತಾರಕಕ್ಕೇರುತ್ತಿದ್ದಂತೆ ವರನ ತಲೆಯಲ್ಲಿದ್ದ ನಕಲಿ ಕೂದಲು ಕೆಳಗೆ ಬಿದ್ದಿದೆ. ಇದನ್ನು ನೋಡಿದ ಕೂಡಲೇ ಗಾಬರಿಗೊಂಡ ಕುಟುಂಬಸ್ಥರು, ಅವನ ಜೇಬಿನಲ್ಲಿದ್ದ ನಕಲಿ ಆಧಾರ್ ಕಾರ್ಡ್ ಪರಿಶೀಲಿಸಿದರು.
ಇದನ್ನೂ ಓದಿ:ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಪ್ರಮಾಣದ ರಾಜಕೀಯ ಅಧಿಕಾರ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ
ತನ್ನ ಗುರುತಿನ ಬಗ್ಗೆ ಆತ ಸುಳ್ಳು ಹೇಳಿದ್ದಾನೆ ಎಂಬುದು ದೃಢಪಟ್ಟಿದೆ. ಮದುವೆಯಾಗಲು ಇಷ್ಟೊಂದು ಸುಳ್ಳು ಹೇಳಿದ್ದಾನೆ ಎಂಬುದು ತಿಳಿಯುತ್ತಿದ್ದಂತೆ ಯುವತಿಯ ಮನೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮದುವೆ ಸ್ಥಳಕ್ಕೆ ಆಗಮಿಸಿ ತಬ್ರೇಜ್ ಆಲಂನನ್ನು ಬಂಧಿಸಿದ್ದಾರೆ. ಸದ್ಯ ತಬ್ರೇಜ್ ಆಲಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ತಿಳಿಸಿದ್ದಾರೆ,(ಏಜೆನ್ಸೀಸ್).
ಬಿಸಿಯೂಟ ತುಂಬ ಅಗತ್ಯ, ದಯವಿಟ್ಟು ಅರ್ಧದಿನ ರಜೆ ಕೊಡ್ಬೇಡಿ: ಮನಕಲಕುವಂತಿದೆ ಈ ವಿದ್ಯಾರ್ಥಿ ಬರೆದ ಪತ್ರ!

80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚಿದ ನಟಿ ಮಾಧವಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತೇ? ಇಲ್ಲಿವೆ ನೋಡಿ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + four =
Remember me
