ತೆಲಂಗಾಣ:ಇದೊಂದು ಅತ್ಯಂತ ವಿಚಿತ್ರ ಪ್ರಕರಣ. ಇಲ್ಲಿ ಸತ್ತು ಹೋದವನೊಬ್ಬ ಸತ್ತ ಮರುದಿನವೇ ತಾನು ಮೃತಪಟ್ಟಿದ್ದ ಆ ಸ್ಥಳದಲ್ಲೇ ಮತ್ತೆ ಕಾಣಿಸಿಕೊಂಡಿದ್ದ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರಿಂದ ಖತರ್ನಾಕ್ ಕೊಲೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸಿಸಿಟಿವಿ ವಿಡಿಯೋ ತುಣುಕನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಸತ್ತು ಹೋಗಿದ್ದ ಎನ್ನಲಾದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿದಲ್ಲದೆ, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣ ಸಚಿವಾಲಯದ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಧರ್ಮನಾಯ್ಕ್ ಬಂಧಿತ ಆರೋಪಿ. ಈತನನ್ನು ಜ. 17ರಂದು ಪುಣೆಯಲ್ಲಿ ಪತ್ತೆ ಮಾಡಿ ಬಂಧಿಸಲಾಗಿದೆ.
ತೆಲಂಗಾಣದ ಮೇದಕ್ ಜಿಲ್ಲೆಯ ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಜ. 9ರಂದು ಹೊಸ ಕಾರೊಂದು ಅಪಘಾತಕ್ಕೀಡಾಗಿದ್ದು, ಕಾರಲ್ಲಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ. ಮಾತ್ರವಲ್ಲ, ಸತ್ತವನ ದೇಹದ ಒಂದು ಕಾಲು ಹೊರತು ಪಡಿಸಿ ಬಹುತೇಕ ಇಡೀದೇಹ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿತ್ತು. ಕಾರಿನ ವಿವರ ಹಾಗೂ ಸ್ಥಳದಲ್ಲಿ ಸಿಕ್ಕ ಗುರುತಿನ ಚೀಟಿ ಮೇರೆಗೆ ವಾರಸುದಾರರನ್ನು ಪತ್ತೆ ಮಾಡಿದ ಪೊಲೀಸರು ಧರ್ಮನಾಯ್ಕ್ ಮನೆಯವರಿಗೆ ಸುದ್ದಿ ತಿಳಿಸಿದ್ದರು. ಅವರು ಶವದ ಕಾಲಿನ ಮೇಲಿನ ಮಚ್ಚೆಯನ್ನು ಗುರುತಿಸಿ ಸತ್ತವ ಧರ್ಮನಾಯ್ಕ್ ಎಂಬುದನ್ನು ಖಚಿತಪಡಿಸಿದ್ದರು. ಬಳಿಕ ಪೊಲೀಸರು ಅಂತಿಮಸಂಸ್ಕಾರಕ್ಕಾಗಿ ಶವವನ್ನು ಮನೆಯವರಿಗೆ ಹಸ್ತಾಂತರಿಸಿದ್ದರು.
ಆದರೆ ಅಪಘಾತದ ಬಗ್ಗೆ ತನಿಖೆಗಿಳಿದ ಪೊಲೀಸರಿಗೆ ಅಪಘಾತ ಸಂಭವಿಸಿದ್ದ ಸ್ಥಳದಲ್ಲೇ ಅದರ ಮರುದಿನವೇ ಧರ್ಮನಾಯ್ಕ್​ನನ್ನು ಹೋಲುವಂಥ ವ್ಯಕ್ತಿ ಬಂದುಹೋಗಿದ್ದು ಗೊತ್ತಾಗಿದೆ. ಬಳಿಕ ಹೆಚ್ಚಿನ ತನಿಖೆಗೆ ಇಳಿದಾಗ ಧರ್ಮಾನಾಯ್ಕ್ ಫೋನ್​ ಸಕ್ರಿಯವಾಗಿದ್ದು, ರಾಜ್ಯದ ಹೊರಗೆ ಚಾಲ್ತಿಯಲ್ಲಿದ್ದು, ಮನೆಯವರ ಜತೆ ಮಾತುಕತೆ ನಡೆಸಿರುವುದು ಕೂಡ ಕಂಡುಬಂದಿದೆ. ಮೊಬೈಲ್ ಫೋನ್ ಟವರ್ ಮಾಹಿತಿ ಆಧರಿಸಿ ಜಾಡು ಪತ್ತೆ ಮಾಡಿದ ಪೊಲೀಸರು ನಿನ್ನೆ ಧರ್ಮನಾಯ್ಕ್​ನನ್ನು ಪುಣೆಯಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.
ಧರ್ಮನಾಯ್ಕ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತನ್ನ ಮೇಲಿರುವ 6 ಕೋಟಿ ರೂ. ವಿಮೆ ಕ್ಲೇಮ್ ಮಾಡಿಸಿಕೊಳ್ಳಲು ಆತ ಈ ನಾಟಕ ಆಡಿರುವ ಮಾಹಿತಿ ಹೊರಬಿದ್ದಿದೆ. ಅದಕ್ಕಾಗಿ ಈತ ತನ್ನ ಹೊಸ ಕಾರಿಗೆ ಚಾಲಕನೊಬ್ಬನನ್ನು ಗೊತ್ತುಮಾಡಿಕೊಂಡು ಕರೆದುಕೊಂಡು ಹೋಗಿದ್ದು, ಬಳಿಕ ಅಪಘಾತ ಆಗುವಂತೆ ಮಾಡಿ, ಚಾಲಕನನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ. ಇದಕ್ಕೆ ನಾಯ್ಕ್ ಪತ್ನಿ ಮತ್ತು ಮನೆಯವರು ಸಹಕರಿಸಿದ್ದು, ಎಲ್ಲರಿಗೂ ಗೊತ್ತಿದ್ದೇ ಈ ನಾಟಕ ಹೆಣೆಯಲಾಗಿತ್ತು. ನಾಯ್ಕ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ
ಇಬ್ಬರು ವಯಸ್ಕ ಪುತ್ರಿಯರ ಜತೆ ನದಿಗೆ ಹಾರಿದ ತಾಯಿ; ಮೂವರ ಶವವೂ ಪತ್ತೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − twenty =
Remember me
