ಗುಜರಾತ್​​: ಸಾವು ಯಾವಾಗ ಯಾರಿಗೆ ಹೇಗೆ ಬರುತ್ತೋ ಗೊತ್ತಾಗೋದೆ ಇಲ್ಲ ಅನ್ನೋ ಮಾತು ಈಗ ಎಲ್ಲರ ಬಾಯಲ್ಲೂ ಹೆಚ್ಚಾಗಿ ಕೇಳಿ ಬರುತ್ತೆ. ಇತ್ತೀಚೆಗಂತೂ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹೃದಯಾಘಾತದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜೊತೆಗೆ ಇದು ಸಾಕಷ್ಟು ಮಂದಿಯನ್ನ ಭಯ ಭೀತರನ್ನಾಗಿಸಿದೆ.ಇದೀಗ ಗುಜರಾತ್​ನ ನವಸಾರಿಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಈ ವಿಡಿಯೊದಲ್ಲಿ ಯುವಕನೊಬ್ಬ ಫೋನ್​ನಲ್ಲಿ ಮಾತನಾಡುತ್ತಿದ್ದಂತೆಯೇ ಕುಸಿದು ಕೆಳಗೆ ಬಿದ್ದಿದ್ದಾನೆ. ಮಾತನಾಡುತ್ತಲೇ ಹೃದಯಾಘಅತಕ್ಕೆ ತುತ್ತಾದ ಯುವಕನನ್ನ ರತ್ನಾ ಕಲಾಕಾರ್​ ಎಂದು ಗುರುತಿಸಲಾಗಿದೆ.
ದೃಶ್ಯದಲ್ಲಿ ಕಂಡಂತೆ ರತ್ನಾ ಕಲಾಕರ್​​ ಕಿಟಕಿ ಬದಿಯಲ್ಲಿ ಇಯರ್​ ಬಡ್ಸ್​​ ಹಾಕಿಕೊಂಡ ಫೊನ್​ನಲ್ಲಿ ಮಾತನಾಡುತ್ತಿದ್ದ. ಆಭರಣದ ವ್ಯಾಪಾರಿಯೊಂದಿಗೆ ರತ್ನಾ ಕಲಾಕರ್​ ಫೋನ್​​ನಲ್ಲಿ ಮಾತನಾಡುತ್ತಿದ್ದ. ಹೀಗೆ ಮಾತನಾಡುತ್ತಿದ್ದ ಸಂದರ್ಭ ಕುಸಿದ ಬಿದ್ದ ಈತನನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ರತ್ನಾ ಕಲಾಕರ್​ ಸಾವನ್ನಪ್ಪಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 7 =
Remember me
