ನವದೆಹಲಿ:ಮೊನ್ನೆಮೊನ್ನೆಯಷ್ಟೇ ಒಬ್ಬರು ಮಹಿಳೆ ಕಸದ ವಾಹನಕ್ಕೆ ಚಿನ್ನದ ಸರ ಹಾಕಿ ಪರದಾಡಿದ್ದು, ಆತಂಕಗೊಂಡಿದ್ದು, ಕಡೆಗೆ ಸಮಯೋಚಿತ ನಿರ್ಧಾರದಿಂದ ಅದನ್ನು ವಾಪಸ್ ಪಡೆದು ಸಂಭ್ರಮಿಸಿದ್ದನ್ನೆಲ್ಲ ಕೇಳಿದ್ದೀರಿ. ಇದು ಕೂಡ ಅಂಥದ್ದೇ ಒಂದು ಸುದ್ದಿ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಕಸ ಎಸೆಯಲು ಎಂದು ಬಂದು ಕಸದ ವಾಹನದೊಳಕ್ಕೇ ಬಿದ್ದುಬಿಟ್ಟ ಅತ್ಯಪರೂಪದ ಪ್ರಸಂಗವೊಂದು ನಡೆದಿದೆ.ಕಸ ಹಾಕಲೂ ಶಾರ್ಟ್​ ಕಟ್​ ಕಂಡುಕೊಳ್ಳಲು ಹೋಗಿ ಫಜೀತಿಗೆ ಒಳಗಾದ ವ್ಯಕ್ತಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೋ ತುಣುಕು ವೈರಲ್​ ಆಗಿದೆ. ಮಾತ್ರವಲ್ಲ ಹಲವರಿಗೆ ಇದು ತಮಾಷೆಯ ದೃಶ್ಯವಾಗಿಯೂ ಕಂಡಿದೆ.
ಕಸ ಎಸೆಯಲೂ ಸುಲಭದ ದಾರಿ ಹಿಡಿದು ಕಸದ ಗಾಡಿಗೇ ಬಿದ್ದ!ವಿವರಗಳಿಗೆhttps://t.co/YaFZZbZDD9ನೋಡಿpic.twitter.com/Rfj3E4rGS5
— Vijayavani (@VVani4U)February 12, 2021

ಮನೆಯ ಬೀದಿಗೆ ಬರುವ ಕಸದ ವಾಹನಕ್ಕೆ ಸುಲಭದಲ್ಲೇ ಕಸ ಹಾಕಲು ಮುಂದಾಗಿದ್ದೇ ಈ ಅವಾಂತರಕ್ಕೆ ಕಾರಣ. ರಸ್ತೆಗೆ ತಾಗಿಕೊಂಡೇ ಮನೆ ಇರುವಂಥ ಈ ವ್ಯಕ್ತಿ, ಮನೆಯ ಮೊದಲ ಮಹಡಿಯಿಂದ ನೇರವಾಗಿ ವಾಹನದೊಳಕ್ಕೆ ಕಸ ಎಸೆಯಲು ಹೋಗಿದ್ದಾರೆ. ಆದರೆ ಆಯತಪ್ಪಿ ವಾಹನದೊಳಕ್ಕೇ ಬಿದ್ದುಬಿಟ್ಟಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. (ಏಜೆನ್ಸೀಸ್)
ತುಂಬು ಗರ್ಭಿಣಿಯನ್ನು ಜೀವಂತ ಸುಟ್ಟ, ಮಾಡಬಾರದ್ದನ್ನು ಮಾಡಿದ್ದ ಗಂಡ!

ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seventeen =
Remember me
