ಚೆನ್ನೈ:ಬ್ಯಾಂಕ್ ಬ್ಯಾಲೆನ್ಸ್​ನಲ್ಲಿ ಕೋಟಿ ರೂಪಾಯಿಯನ್ನು ನೋಡಬೇಕು ಎಂದರೆ ಸಂಪಾದನೆ ಅಂಥ ದೊಡ್ಡ ಮಟ್ಟದಲ್ಲೇ ಇರಬೇಕು. ಆದರೆ ಇಲ್ಲಿ ಕೆಲವರು ದುಡಿಯದೇ ಕೋಟ್ಯಧಿಪತಿಗಳಾಗಿದ್ದಾರೆ. ಬ್ಯಾಲೆನ್ಸ್​ ಚೆಕ್​ ಮಾಡಿದಾಗ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇರುವುದು ಕಂಡುಬಂದಿದೆ.
ತಮಿಳುನಾಡಿನ ಮೂವರು ಹೀಗೊಮ್ಮೆ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ. ಇಲ್ಲಿನ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುವ ಮೊಹಮ್ಮದ್ ಇದ್ರಿಸ್ ಎಂಬಾತ ತನ್ನ ಗೆಳೆಯನಿಗೆ 2 ಸಾವಿರ ರೂ. ಟ್ರಾನ್ಸ್​ಫರ್ ಮಾಡುತ್ತಿದ್ದಂತೆ ಕೋಟ್ಯಧಿಪತಿ ಆಗಿದ್ದಾನೆ. ಅರ್ಥಾತ್, ಅ.6ರಂದು 2 ಸಾವಿರ ರೂ. ಕಳುಹಿಸಿ ಬ್ಯಾಲೆನ್ಸ್ ಚೆಕ್​ ಮಾಡಿದಾಗ ಖಾತೆಯಲ್ಲಿ 753 ಕೋಟಿ ರೂ. ಇರುವುದು ಕಂಡುಬಂದಿದೆ.
ಕೋಟಕ್ ಮಹಿಂದ್ರ ಬ್ಯಾಂಕ್​ನಲ್ಲಿನ ಇವರ ಖಾತೆಯಲ್ಲಿ ಈ ಹಣ ಕಂಡುಬಂದಿದ್ದು, ಅಚ್ಚರಿಗೊಂಡ ಇವರು ಈ ವಿಷಯವನ್ನು ಬ್ಯಾಂಕ್​ ಗಮನಕ್ಕೆ ತಂದಿದ್ದರು. ಬಳಿಕ ಬ್ಯಾಂಕ್​ನವರು ಇವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಅಂದಹಾಗೆ ತಮಿಳುನಾಡಿನಲ್ಲಿ ಇದು ಮೊದಲ ಪ್ರಕರಣವೇನಲ್ಲ. ಈಗಾಗಲೇ ಇನ್ನಿಬ್ಬರಿಗೂ ಇದೇ ರೀತಿ ಕೋಟಿಗಟ್ಟಲೆ ಹಣ ಖಾತೆಯಲ್ಲಿ ಜಮೆ ಆಗಿರುವುದು ಕಂಡುಬಂದಿದೆ. ಬ್ಯಾಲೆನ್ಸ್ ಚೆಕ್​ ಮಾಡಿಕೊಂಡಿದ್ದ ಅವರಿಗೂ ಅಚ್ಚರಿ ಉಂಟಾಗಿತ್ತು.
ತಮಿಳುನಾಡು ಮರ್ಕಂಟೈಲ್ ಬ್ಯಾಂಕ್​ನಲ್ಲಿ ಕಾತೆ ಹೊಂದಿರುವ ಚೆನ್ನೈನ ರಾಜಕುಮಾರ್​ ಎಂಬವರ ಖಾತೆಯಲ್ಲಿ 9 ಸಾವಿರ ಕೋಟಿ ರೂ. ಇರುವುದು ಕಂಡುಬಂದಿತ್ತು. ಆದರೆ ಕೂಡಲೇ ಎಚ್ಚೆತ್ತ ಬ್ಯಾಂಕ್ ತಕ್ಷಣ ಆ ಮೊತ್ತವನ್ನು ವಾಪಸ್ ಪಡೆದುಕೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ತಂಜಾವೂರಿನ ಗಣೇಶನ್ ಎಂಬವರ ಖಾತೆಯಲ್ಲಿ 756 ಕೋಟಿ ರೂ. ಇರುವುದು ಕಂಡುಬಂದಿತ್ತು.
ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 6 =
Remember me
