ಬಿಲ್ವಾರಾ:ದೇಶದಲ್ಲಿ ಎಲ್ಲ ಕಡೆ ಕರೊನಾ ವೈರಸ್​ ಪ್ರಮಾಣ ಹೆಚ್ಚುತ್ತಿದ್ದರೂ…ಕೆಲವರ ಬೇಜವಾಬ್ದಾರಿತನ ಮಾತ್ರ ಹಾಗೇ ಇದೆ.ಲಾಕ್​ಡೌನ್​ ತೆರವುಗೊಳಿಸಿದ್ದರೂ, ಸಾಮಾಜಿಕ ಅಂತರ ನಿಯಮ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಗುಂಪುಗೂಡಬೇಡಿ. ಮದುವೆ ಮತ್ತಿತರ ಸಮಾರಂಭದಲ್ಲಿ ಜಾಸ್ತಿ ಜನ ಸೇರಬೇಡಿ ಎಂಬಿತ್ಯಾದಿ ನಿಯಮಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಹೇರಿದೆ. ಆದರೆ ಕೆಲವರು ಕದ್ದುಮುಚ್ಚಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಮನಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.
ಇದೀಗ ರಾಜಸ್ಥಾನದಲ್ಲಿ ಕುಟುಂಬವೊಂದು ಇಂಥದ್ದೇ ಎಡವಟ್ಟು ಮಾಡಿ, ಕೊವಿಡ್​-19 ಸೋಂಕು ಹರಡಲು ಕಾರಣವಾಗಿದೆ. ಹಾಗೇ ಕರೊನಾ ನಿಯಂತ್ರಣದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ ಆ ಕುಟುಂಬಕ್ಕೆ ಬರೋಬ್ಬರಿ 6 ಲಕ್ಷ ರೂ.ದಂಡವನ್ನು ವಿಧಿಸಲಾಗಿದೆ.ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಭಾಡಡಾ ಮೊಹಲ್ಲಾದ ನಿವಾಸಿಯಾದ ಘಿಸುಲಾಲ್​ ರಾಠಿ ಎಂಬುವರು ಜೂ.13ರಂದು ತಮ್ಮ ಪುತ್ರನ ಮದುವೆ ಸಮಾರಂಭ ನಡೆಸಿದ್ದರು. ಅದರಲ್ಲಿ 50ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಆದರೆ ಕರೊನಾ ನಿಯಂತ್ರಣದ ನಿಯಮದ ಪ್ರಕಾರ ಅಷ್ಟು ಮಂದಿ ಭಾಗವಹಿಸುವಂತಿರಲಿಲ್ಲ. ಅದರಲ್ಲೂ ಅವರಿದ್ದ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.ಇದನ್ನೂ ಓದಿ:40ನೇ ವಯಸ್ಸಲ್ಲಿ ಮೂರನೇ ಮದುವೆ!; ಮೂವರು ಮಕ್ಕಳಿರುವ ಈ ನಟಿಯ ಕಥೆ ಇದು..
ಆದರೆ ಮದುವೆ ಮುಗಿದ ಮೂರ್ನಾಲ್ಕು ದಿನದಲ್ಲಿ ಒಂದು ಶಾಕ್​ ಕಾದಿತ್ತು. ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ 50 ಮಂದಿಯಲ್ಲಿ, 15 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲೂ ಓರ್ವ ವೈರಸ್​ನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಜಿಲ್ಲಾಧಿಕಾರಿ ರಾಜೇಂದ್ರ ಭಟ್ಟ ತಿಳಿಸಿದ್ದಾರೆ.ಇದನ್ನೂ ಓದಿ:ವಿದೇಶಿ SHAREit ಬದಲು ಸ್ವದೇಶಿ Z share: ಕನ್ನಡಿಗನಿಂದ ತಯಾರಾಗಿದೆ ಹೊಸ ಆ್ಯಪ್‌
ಇಷ್ಟೆಲ್ಲ ಅವಾಂತರವಾಗಲು ಕಾರಣರಾದ ರಾಠಿ ವಿರುದ್ಧ ಜೂ.22ರಂದು ಪ್ರಕರಣ ದಾಖಲಾಗಿದೆ. ಮದುವೆಯಲ್ಲಿ ಭಾಗವಹಿಸಿದ್ದವರನ್ನು, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಟ್ರೇಸ್​ ಮಾಡಿ ಕ್ವಾರಂಟೈನ್​ ಮಾಡಬೇಕಾಗಿರುವದರಿಂದ ಅದಕ್ಕೆ ಖರ್ಚಾಗುವ ಹಣವನ್ನು ರಾಠಿಯವರಿಂದಲೇ ರಾಜ್ಯ ಸರ್ಕಾರ ವಸೂಲು ಮಾಡಿದೆ. ಅಷ್ಟೆಲ್ಲ ನಿಯಮಗಳನ್ನು ಹೇರಿದ್ದರೂ ಎಲ್ಲವನ್ನೂ ಉಲ್ಲಂಘಿಸಿ ಮಗನ ಮದುವೆ ಮಾಡಿ, ಸೋಂಕು ಹರಡಲು ಕಾರಣರಾದ ಅವರಿಗೆ 6,26,600 ರೂ.ದಂಡ ವಿಧಿಸಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಹಣ ಡಿಪೋಸಿಟ್​ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.
ಮದುವೆಗೆ ಆಗಮಿಸಿದ್ದವರನ್ನೆಲ್ಲ ಕ್ವಾರಂಟೈನ್​, ಐಸೋಲೇಟ್​ ಮಾಡಿ, ಅವರಿಗೆ ಆಹಾರ, ತಪಾಸಣೆ, ಆಂಬುಲೆನ್ಸ್​ ವ್ಯವಸ್ಥೆಗಳನ್ನೆಲ್ಲ ಮಾಡಲು ರಾಠಿಯವರಿಗೆ ವಿಧಿಸಲಾದ ದಂಡದ ಹಣವನ್ನೇ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)
ಮದುವೆ ಹೆಸರಲ್ಲಿ ಶಾಮ್ನಾಗೆ ವಂಚನೆ ಪ್ರಕರಣ: ಶತ್ರು ಪಕ್ಕದಲ್ಲೇ ಇದ್ರೂ ನಟಿಗೆ ಗೊತ್ತಾಗಲಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 15 =
Remember me
