ಪಟನಾ:ನೆರೆಮನೆಯ ನಾಯಿಯ ನಿರಂತರ ಬೊಗಳುವಿಕೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಅದನ್ನು ಕೊಲ್ಲಲು ಮೂರು ಸುತ್ತು ಗುಂಡು ಹಾರಿಸಿದ. ಆದರೆ, ನಾಯಿ ಸಾಯದೆ, 10 ವರ್ಷದ ಬಾಲಕಿಯ ಕೈಗೆ ತಗುಲಿ ಗಾಯವಾಯಿತು.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿದು ಮನಸೋಇಚ್ಛೆ ಥಳಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಿಹಾರದ ರೊಹಟಾಸ್​ ಜಿಲ್ಲೆಯ ಬೇಲದಿ ಎಂಬ ಗ್ರಾಮದ ನಿವಾಸಿ ಗೋಪಾಲ್​ ರಾಂ (55) ಮೃತಪಟ್ಟವ. ಪಕ್ಕದ ಮನೆಯ ಸಾಕು ನಾಯಿ ನಿರಂತರವಾಗಿ ಬೊಗಳುತ್ತಿತ್ತು ಎಂದು ಬೇಸತ್ತು ಈತ ಆ ನಾಯಿಯನ್ನು ಕೊಲ್ಲಲು ಮುಂದಾಗಿದ್ದ ಎನ್ನಲಾಗಿದೆ.
ಈತ ಮೂರು ಸುತ್ತು ಗುಂಡು ಹಾರಿಸಿದ್ದು, ಈತ ಸಿಡಿಸಿದ ಮೂರನೇ ಗುಂಡು ನಾಯಿಯ ಮಾಲೀಕ ವಿನೋದ್​ ರಾಮ್​ನ ಪುತ್ರಿ ಭೂಮಿಕಾ ಕುಮಾರಿಯ (10) ಕೈಗೆ ತಗುಲಿತು. ಗಾಯಗೊಂಡ ಆಕೆಯನ್ನು ತಕ್ಷಣವೇ ಸಸಾರಾಂ ಸಾದರ್​ ಹಾಸ್ಪಿಟಲ್​ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಉಮರಿಯ ರುದ್ರಪಶುಪತಿ ಶ್ರೀಗಳ ಕೊಲೆಗಾರನೊಬ್ಬನ ಬಂಧನ
ಈ ಬಗ್ಗೆ ದರಿಹಾತ್​ ಪೊಲೀಸ್​ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರಿಗೆ ಹೇಳಿಕೆ ನೀಡಿರುವ ವಿನೋದ್​ ರಾಮ್​, ಆತನ ನನ್ನ ಪುತ್ರಿಯ ಮೇಲೆ ಗುಂಡಿನ ದಾಳಿ ನಡೆಸಿದ ಎಂಬ ಕಾರಣಕ್ಕಾಗಿ ಗ್ರಾಮಸ್ಥರು ಗೋಪಾಲ್​ ರಾಮ್​ನನ್ನು ಥಳಿಸಿದರು. ಕೊಲ್ಲುವ ಉದ್ದೇಶ ಇರಲಿಲ್ಲ. ಆದರೆ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಎಫ್​ಐಆರ್​ನಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸಿದ ಗೋಪಾಲ್​ ರಾಮ್​ ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ಒಡ್ಡಿದ್ದಾಗಿ ಆರೋಪಿಸಲಾಗಿದೆ. ಇದೀಗ ಪೊಲೀಸರು ಗೋಪಾಲ್​ ರಾಮ್​ನನ್ನು ಥಳಿಸಿದ ಗ್ರಾಮಸ್ಥರಿಗಾಗಿ ಹುಡುಕಾಟ ನಡೆಸಿದ್ದಾರೆ.
ಕರೊನಾ ಟೆಸ್ಟ್ ಮಾಡಿಸಿಕೊಳ್ಳದ ದಿನಗೂಲಿ ಕಾರ್ಮಿಕನನ್ನು ಕೊಂದ ಸಂಬಂಧಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
