ತಿರುಚ್ಚಿ:ಕಾರೊಂದಲ್ಲಿ ವಿವಾಹಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿರುವ ಘಟನೆ ಕೇರಳದ ತಿರುಚ್ಚಿ ಬಳಿ ನಡೆದಿದೆ.ಇದನ್ನೂ ಓದಿ:ಚಿಪ್ಸ್ ಪ್ಯಾಕೆಟ್​​ ಕದಿಯುವಾಗ ಸಿಕ್ಕಿಬಿದ್ದ ಬಾಲಕ: ಥಳಿಸಿ, ಮಾರ್ಕೆಟ್​​ನಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ರು..ಆದಲರಸು (38) ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ತಿರುಚ್ಚಿ ಕೊನಕರೈ ಪ್ರದೇಶದ ರಸ್ತೆಯಲ್ಲಿ 4 ದಿನಗಳಿಂದ ಒಂದೇ ಸ್ಥಳದಲ್ಲಿ ಕಾರೊಂದು ನಿಂತಿತ್ತು. ಆ ಭಾಗದ ಜನರು ಅನುಮಾನಗೊಂಡು ಕಾರಿನೊಳಗೆ ನೋಡಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬ ಮಲಗಿದ್ದು ಎ.ಸಿ. ಹಾಗೆಯೇ ಚಾಲೂ ಇದ್ದು, ಕಾರಿಂದ ದುರ್ವಾಸನೆ ಬರುತ್ತಿತ್ತು. ಕೊನೆಗೆ ಸ್ಥಳಿಯರು ಹೆದರಿ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಉರೆಯೂರು ಪೊಲೀಸರು ಕಾರಿನ ಬಾಗಿಲು ಒಡೆದಿದ್ದು, ಆ ವೇಳೆ ಕಾರಿನೊಳಗಿದ್ದ ವ್ಯಕ್ತಿಯ ದೇಹ ಕೊಳೆತ ಸ್ಥಿತಿಯಲ್ಲಿತ್ತು. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಿದಾಗ ಈತ ಕರೂರು ಜಿಲ್ಲೆಯ ಕುಳಿತ್ತಲೈ ಮುದಲೈಪಟ್ಟಿ ಸೀಡ್ ಫಾರ್ಮ್ ರಸ್ತೆಯ ಆದಲರಸು (38 ವರ್ಷ) ಎಂದು ತಿಳಿದು ಬಂದಿದ್ದು, ಆತ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕುತ್ತಿಗೆ ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕ: ರಕ್ತಪಿಪಾಸುವಿನ ಜೀವ ತೆಗೆದ ಸ್ನೇಹಿತಜುಲೈ 31ರಂದು ಪತ್ನಿ ಲಕ್ಷ್ಮಿ ಪ್ರಿಯಾ ಮತ್ತು 2 ವರ್ಷದ ಮಗಳನ್ನು ತಂಜಾವೂರಿನ ತಿರುಪಾಂಡುರ್ತಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಬಿಟ್ಟು ಅಲ್ಲಿಂದ ಹೊರಟಿದ್ದು, ಬಳಿಕ ಮನೆ ತಲುಪಿರಲಿಲ್ಲ. ಆತನನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಅನುಮಾನಗೊಂಡ ಪತ್ನಿಯು ತನ್ನ ಪತಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.ಕಾರು ಚಾಲನೆ ಮಾಡುವಾಗ ಆತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆಯೇ? ಅಥವಾ ಬೇರೆ ಕಾರಣವೇ? ಎಂಬುದನ್ನು ಪತ್ತೆ ಹಚ್ಚೆ ಸಲುವಾಗಿ ವಯ್ಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
