ಉತ್ತರಪ್ರದೇಶ:ಇಲ್ಲಿನ ಅಯೋಧ್ಯೆಯ ದೇವಸ್ಥಾನವೊಂದರ ಆವರಣದಲ್ಲಿ ಸಂಬಂಧಿಯಿಂದಲೇ ಕೊಲೆಯೊಂದು ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಂಕಜ್​ ಶುಕ್ಲಾ (35) ಕೊಲೆಗೀಡಾದವ. ಈತನ ಕಸಿನ್ ಗೋಲು ಮಿಶ್ರಾ ಕೊಲೆಗಾರ.
ಅಮೇಠಿ ನಿವಾಸಿ ಪಂಕಜ್ ಶುಕ್ಲ ತನ್ನ ತಾಯಿಯ ಊರಾದ ಅಯೋಧ್ಯೆಯ ಭುವಾಪುರ್ ಗ್ರಾಮಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಇಲ್ಲಿನ ಕುಮಾರ್​ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸ್ಥಾನವೊಂದರ ಆವರಣದಲ್ಲಿ ಇಂದು ರಕ್ತದ ಮಡುವಲ್ಲಿದ್ದ ಶವ ಕಂಡುಬಂದಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಗೋಲು ಮಿಶ್ರಾನನ್ನು ಬಂಧಿಸಿದ್ದಾರೆ. ಶನಿವಾರ ರಾತ್ರಿ ಶುಕ್ಲ ಮತ್ತು ಮಿಶ್ರಾ ನಡುವೆ ಮದ್ಯಪಾನದ ಮತ್ತಿನಲ್ಲಿ ಜಗಳವಾಗಿತ್ತು. ಈ ಸಂದರ್ಭದಲ್ಲಿ ಮಿಶ್ರಾ ಹರಿತವಾದ ಆಯುಧದಿಂದ ಶುಕ್ಲನ ಕತ್ತು ಸೀಳಿ ಓಡಿಹೋಗಿದ್ದ ಎಂಬುದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಅಸ್ತಿತ್ವಕ್ಕಾಗಿ ಹೋರಾಡುವ ಪಕ್ಷಗಳನ್ನು ನೋಡಿ ನಗಬೇಡಿ: ಮೋದಿ ಹೀಗಂದಿದ್ದೇಕೆ?

ರಾಜಧಾನಿಯಲ್ಲೇ ಪತ್ತೆಯಾಯ್ತು ಮಹಿಳೆಯ ಸುಟ್ಟು ಕರಕಲಾದ ದೇಹ!; ಇನ್ನೂ ಪತ್ತೆಯಾಗದ ಗುರುತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + one =
Remember me
