ನವದೆಹಲಿ:ದೂರದ ಉತ್ತರ ಪ್ರದೇಶದಲ್ಲಿನ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿರುವ ಪ್ರಕರಣ ಕರ್ನಾಟಕದ ವರೆಗೂ ಸಂಪರ್ಕ ಪಡೆದಿದ್ದು, ಇಲ್ಲಿನ ಯುವಕನೊಬ್ಬನ ವಿರುದ್ಧ ಅಪಹರಣ ಹಾಗೂ ಮತಾಂತರ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿನ ಯುವತಿ ಕಾಲೇಜಿಗೆ ಹೋದವಳು ಮರಳದ ಕಾರಣ ಆಕೆಯ ತಂದೆ ಜ. 5ರಂದು ಅಲ್ಲಿನ ಚಿಲುವತಾಳ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ರೈ, ಮೂವರು ಪೊಲೀಸರನ್ನು ತನಿಖೆಗೆ ನಿಯೋಜಿಸಿದ್ದರು. ತನಿಖಾ ತಂಡ ಯುವತಿಯ ಮೊಬೈಲ್​ ಫೋನ್​ ಕಾಲ್​ ಡಿಟೇಲ್ಸ್ ಪರಿಶೀಲಿಸಿದಾಗ ಒಂದು ನಂಬರ್​ಗೆ ತುಂಬ ಕರೆ ಹೋಗಿರುವುದು ಕಂಡುಬಂದಿತ್ತು. ಆ ನಂಬರನ್ನು ಪರಿಶೀಲಿಸಿದಾಗ ಅದು ಕರ್ನಾಟಕದ ಮೆಹಬೂಬ್​ ಎಂಬವನ ಹೆಸರಲ್ಲಿ ಇರುವುದಾಗಿ ತಿಳಿದು ಬಂದಿದೆ.
ತನಿಖೆಯ ಬೆಳವಣಿಗೆಯಲ್ಲಿ ಕಂಡುಬಂದ ಅಂಶಗಳ ಪ್ರಕಾರ, ಯುವತಿಯ ತಂದೆ ಬಳಿಕ ಅಪಹರಣ ಹಾಗೂ ಮತಾಂತರ ಪ್ರಕರಣ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮೂವರು ಪೊಲೀಸರ ತಂಡ ಯುವತಿ ಹಾಗೂ ಆರೋಪಿಯ ಪತ್ತೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಕಾಣೆಯಾದ ಯುವತಿ ನಿವೃತ್ತ ಸೈನಿಕರೊಬ್ಬರ ಪುತ್ರಿಯಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಆರೋಪಿ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನಾಪತ್ತೆಯಾಗಿರುವ ಯುವತಿ ಹಾಗೂ ಆರೋಪಿ ಇಬ್ಬರೂ ಸಿಕ್ಕ ಬಳಿಕ ವಾಸ್ತವಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ರಕ್ತನಾಳದ ತುಂಬೆಲ್ಲಾ ಬೆಳೆಯಿತು ವಿಚಿತ್ರ ‘ಮ್ಯಾಜಿಕ್‌’ ಅಣಬೆಗಳು! ಚಿಕಿತ್ಸೆ ನೀಡಿದ ವೈದ್ಯರೇ ಸುಸ್ತು!

ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − five =
Remember me
