ಒಡಿಶಾ:ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ಸ್ಮರಣಾರ್ಥ ಈ ಅದ್ಭುತ ಸ್ಮಾರಕ ನಿರ್ಮಿಸಿದ್ದಾನೆ. ಇದೀಗ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ಪತ್ನಿಗಾಗಿ 7 ಕೋಟಿ ವೆಚ್ಚದ ಸುಂದರ ದೇವಾಲಯವನ್ನು ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಿರ್ಮಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಪತ್ನಿಗಾಗಿ ದೇವಾಲಯವನ್ನು ನಿರ್ಮಿಸಿದ ವ್ಯಕ್ತಿ ಖೇತ್ರವಾಸಿ ಲೆಂಕ ಅವರೊಬ್ಬ ಉದ್ಯಮಿ. ಅವರ ಪತ್ನಿಯ ಹೆಸರು ಬೈಜಂತಿ. ಖೇತ್ರವಾಸಿ ಲೆಂಕಾ ಅವರು 1992ರಲ್ಲಿ ವಿವಾಹವಾದರು. ಅವರ ಪತ್ನಿ ಸಂತೋಷಿ ಮಾ ಭಕ್ತರಾಗಿದ್ದರು. ಹೀಗಾಗಿ ಈ ಜೋಡಿ ದೇವಾಲಯ ನಿರ್ಮಾಣ ಮಾಡಿದೆ.
‘ಮದುವೆಯಾದ ನಂತರ ಗ್ರಾಮದಲ್ಲಿ ಸಂತೋಷಿ ಮಾತೆಯ ಚಿಕ್ಕ ದೇವಸ್ಥಾನವನ್ನು ನಿರ್ಮಿಸೋಣ ಎಂದುಕೊಂಡಿದ್ದೆವು. ಈ ಸಣ್ಣ ದೇವಾಲಯವು ತುಂಬಾ ದೊಡ್ಡದಾಗುತ್ತದೆ ಎಂದು ನಿವಾಸಿಗಳು ಯೋಚಿಸಿರಲಿಲ್ಲ. ಈ ದೇವಾಲಯವನ್ನು ನಿರ್ಮಿಸಿದ ನಂತರ ನನಗೂ ಸಂತೋಷವಾಗಿದೆ’ ಎಂದು ಖೇತ್ರವಾಸಿ ಲೆಂಕ ಅವರು ಹೇಳಿದ್ದಾರೆ.
ಇದನ್ನೂ ಓದಿ:73 ದಿನ ಪ್ರಯಾಣ; ಬೈಕ್​​ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿದ ಕೂಡಲೇ ಮೃತ್ಯು
‘2008ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಈಗ ಈ ದೇವಾಲಯವು ಸಿದ್ಧವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯ ನಿರ್ಮಿಸಲು ಎಲ್ಲಾ ಕುಶಲಕರ್ಮಿಗಳು ಚೆನ್ನೈನಿಂದ ಬಂದಿದ್ದರು. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯ ಮೂರ್ತಿಯನ್ನು ಗ್ರಾಮ ಮಾತ್ರವಲ್ಲದೆ ದೇಶದಾದ್ಯಂತ ಜನರು ಪೂಜಿಸಿ ಸಂತೋಷಿ ಮಾತೆಯ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ’ ಎಂದು ಬೈಜಂತಿ ಹೇಳುತ್ತಾರೆ.
VIDEO| ನಡುರಾತ್ರಿ ರಸ್ತೆ ಗುಂಡಿ ಮುಚ್ಚವ ಕೆಲಸಕ್ಕೆ ಕೈ ಹಾಕಿದ ನಟಿ ಕಾರುಣ್ಯ ರಾಮ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
