ಹೈದರಾಬಾದ್​:ದೇವಸ್ಥಾನಕ್ಕೆ ಬಂದಿದ್ದ ಭಕ್ತನೊಬ್ಬ 100 ಕೋಟಿ ರೂ. ಮೊತ್ತ ನಮೂದಿಸಿದ್ದ ಚೆಕ್​ ದೇಣಿಗೆಯಾಗಿ ನೀಡಿದ್ದಾನೆ. ಇದುವರೆಗೆ ಯಾರೂ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ನೀಡದ್ದರಿಂದ ಅಚ್ಚರಿಗೊಂಡ ದೇವಸ್ಥಾನದ ಆಡಳಿತ ಮಂಡಳಿಗೆ, ಆ ಚೆಕ್ ನಗದೀಕರಿಸಿಕೊಳ್ಳಲು ಹೋಗಿದ್ದಾಗ ಅದಕ್ಕಿಂತಲೂ ದೊಡ್ಡ ಅಚ್ಚರಿ ಉಂಟಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂ ಎಂಬಲ್ಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಈ ಪ್ರಕರಣ ನಡೆದಿದೆ. ಆರಂಭದಲ್ಲಿ ಈತ ಚೆಕ್​ನಲ್ಲಿ 10 ಎಂಬುದನ್ನಷ್ಟೇ ಬರೆದಿದ್ದು, ಬಳಿಕ ಸೊನ್ನೆಗಳನ್ನು ಸೇರಿಸುತ್ತ ಹೋಗಿದ್ದು, ನೂರು ಕೋಟಿ ರೂ. ಎಂದು ನಮೂದಿಸಿದ್ದಾನೆ. ಹೀಗೆ ಭರ್ಜರಿ ಮೊತ್ತದ ದೇಣಿಗೆಯ ಚೆಕ್ ನೋಡಿ ಆಡಳಿತ ಸಿಬ್ಬಂದಿ ಅಚ್ಚರಿಗೊಂಡಿದ್ದರು.
ಇದನ್ನೂ ಓದಿ:ಕಳೆದುಕೊಂಡಿದ್ವಿ ಅಂದುಕೊಂಡಿದ್ದೆ.. ವರ್ಷಗಳ ಕಾಲ ಹುಡುಕಾಡುತ್ತಿದ್ದುದು ಈಗ ಸಿಕ್ತು: ಸುಮಲತಾ ಅಂಬರೀಷ್
ಆದರೆ ದೇವಸ್ಥಾನದವರು ಚೆಕ್​ ನಗದೀಕರಿಸಿಕೊಳ್ಳಲು ಬ್ಯಾಂಕ್​ಗೆ ಹೋಗಿದ್ದಾಗ ಅವರಿಗೆ ಅದಕ್ಕಿಂತ ದೊಡ್ಡ ಅಚ್ಚರಿ ಕಾದಿತ್ತು. ನೂರು ಕೋಟಿ ರೂ. ಮೊತ್ತದ ಚೆಕ್​ ನೀಡಿದ್ದ ಆತನ ಖಾತೆಯಲ್ಲಿ ಇದ್ದಿದ್ದು ಬರೀ 17 ರೂಪಾಯಿ. ಆತ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾಗಿದ್ದಲ್ಲಿ ಆತನ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ದೇವಸ್ಥಾನದವರು ತಿಳಿಸಿದ್ದಾರೆ. –ಏಜೆನ್ಸೀಸ್
ಚಂದ್ರಯಾನ-3 ಲ್ಯಾಂಡಿಂಗ್​ ಆದ ದಿನವನ್ನು ‘ಇಸ್ರೋ ದಿನ’ ಎಂದು ಘೋಷಿಸಿ: ಸರ್ಕಾರಕ್ಕೆ ಒತ್ತಾಯ

ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸಲಿರುವ ಭಾರತೀಯ ಕುಸ್ತಿಪಟುಗಳು ಭಾರತವನ್ನು ಪ್ರತಿನಿಧಿಸುವಂತಿಲ್ಲ: ಕಾರಣ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + fourteen =
Remember me
