ನವದೆಹಲಿ:ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲ್ಲಿಸಲು ಮೂವರನ್ನು ನೇಮಿಸಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಆ ಮತ್ತೊಬ್ಬಳ ವಿಷಯವನ್ನು ಬಾಯ್ಬಿಟ್ಟ ಪ್ರಕರಣವೊಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಆ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಇಂಥದ್ದೊಂದು ಪ್ರಕರಣ ಗುರುವಾರ ನಡೆದಿದ್ದು, 33 ವರ್ಷದ ಮಹಿಳೆಯೊಬ್ಬಳು ಪತಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆರೋಪಿ ಪತಿ ಕೇಬಲ್ ಆಪರೇಟರ್​ ಆಗಿದ್ದು, ಆತನಿಗೆ ಗೋವಿಂದಪುರಿ ಎಂಬಲ್ಲಿನ ಮೂವರು ಸಹಕರಿಸಿದ್ದಾರೆ. ಪತ್ನಿಯ ಕೊಲೆಗಾಗಿ ಪತಿ ಈ ಮೂವರಿಗೆ 5 ಲಕ್ಷ ರೂ. ಕೊಡುವುದಾಗಿ ಮಾತುಕೊಟ್ಟಿದ್ದ. ಆರೋಪಿಗಳು ಆಕೆ ಮನೆಯಲ್ಲಿ ಒಂಟಿಯಾಗಿದ್ದಾಗ ಹೋಗಿ 20 ಸಲ ಇರಿದು ಸಾಯಿಸಿದ್ದರು. ಬಳಿಕ ಪ್ರಕರಣದ ದಾರಿ ತಪ್ಪಿಸಲು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು.
ಇದನ್ನೂ ಓದಿ:ಸಿಂಗಲ್​, ಡಬಲ್, ಟ್ರಿಪಲ್ ಸ್ಟಾರ್​ಗಳಿಂದಲೂ ಪವರ್​ ಸ್ಟಾರ್ ಸ್ಮರಣೆ; ಅಪ್ಪು ಸ್ಮರಣಾರ್ಥ ಪೊಲೀಸರಿಂದ ಸೈಕಲ್ ಜಾಥಾ
ಗುರುವಾರ ರಾತ್ರಿ 7ರ ಹಾಗೆ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟಿದ್ದ ಪತ್ನಿಯನ್ನು ಪತಿಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗ ಅನುಮಾನ ಬಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮೇರೆಗೆ ಆಸ್ಪತ್ರೆಗೆ ತೆರಳಿ ಪರಿಶೀಲಿಸಿ ತನಿಖೆ ನಡೆಸಿದಾಗ ಪತಿಯೇ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂಬುದಾಗಿ ದಕ್ಷಿಣ ಜಿಲ್ಲಾ ಡಿಸಿಪಿ ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.
ಇದನ್ನೂ ಓದಿ:‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಫೋನ್​ ಕರೆ ಮಾಹಿತಿಗಳನ್ನು ಪರಿಶೀಲಿಸಿದಾಗ ಆತ ಮಹಿಳೆಯೊಬ್ಬಳ ಜತೆ ನಿರಂತರ ಸಂಪರ್ಕದಲ್ಲಿ ಇರುವುದು ಬಹಿರಂಗಗೊಂಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಆತ ಕುಸಿದು ಬಿದ್ದು ತಪ್ಪೊಪ್ಪಿಕೊಂಡಿದ್ದಾನೆ. ವಿವಾಹೇತರ ಸಂಬಂಧದ ಬಗ್ಗೆ ಪತ್ನಿಗೆ ಗೊತ್ತಾಗಿದೆ. ಆಕೆ ಕಳಿಸಿದ್ದ ವಾಯ್ಸ್​ ಕ್ಲಿಪ್​ವೊಂದನ್ನು ಪತ್ನಿ ಕೇಳಿದ್ದು, ಆ ಬಳಿಕದಿಂದ ಇಬ್ಬರ ಮಧ್ಯೆ ಸಂಘರ್ಷ ಉಂಟಾಗಿದೆ ಎಂಬುದನ್ನು ತಿಳಿಸಿದ್ದಾನೆ.
ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

ಲಗ್ನವಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿಯ ಮಧ್ಯಪ್ರವೇಶ: ಈ ಮದ್ವೆ ಬೇಡ ಎಂದು ಆಕೆಯ ಮನವೊಲಿಕೆ; ಕಾರಣ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
