ಹೈದರಾಬಾದ್:2024ರಲ್ಲಿ ತನ್ನ ಸ್ನೇಹಿತ ಹೊಸದಾಗಿ ಖರೀದಿಸಿದ ಕಾರನ್ನು ನೋಂದಾಯಿಸಿದ್ದಾರೆ. ಆದರೆ, ಈ ಕಾರಿಗೆ 2020ರಲ್ಲಿ ಟ್ರಾಫಿಕ್ ಚಲನ್ ಬಂದಿದೆ ಎಂಬ ಶಾಕಿಂಗ್ ಸಂಗತಿಯನ್ನು ಶುಕ್ರವಾರ (ಫೆಬ್ರವರಿ 23) ಎಕ್ಸ್ (ಈ ಹಿಂದಿನ ಟ್ವಿಟರ್) ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತೆಲಂಗಾಣ ರಾಜ್ಯ ಪೊಲೀಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಚಲನ್ ವಿವರಗಳನ್ನು ತೋರಿಸುವ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದನ್ನೂ ಓದಿ:ಮೈಸೂರು ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಸಾ.ರಾ. ಮಹೇಶ್ ಸ್ಪರ್ಧೆ?
‘ನೈಟ್ ಔಲ್’ ಹೆಸರಿನ ಎಕ್ಸ್ ಬಳಕೆದಾರರೊಬ್ಬರು ಇದನ್ನು “ಟೈಮ್ ಟ್ರಾವೆಲಿಂಗ್ ಟ್ರಾಫಿಕ್ ಟಿಕೆಟ್” ಎಂದು ಶೀರ್ಷಿಕೆ ಕೊಟ್ಟು ಮಾಹಿತಿ ಹಂಚಿಕೊಂಡಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ನಗರ ಸಂಚಾರ ಪೊಲೀಸರನ್ನು ಒತ್ತಾಯಿಸಿದ್ದಾರೆ. 2024ರಲ್ಲಿ ಖರೀದಿಸಿದ ಹೊಸ ಕಾರಿಗೆ ಸಂಚಾರ ನಿಯಮ ಉಲ್ಲಂಘನೆಗಾಗಿ 2020ರಲ್ಲೇ ಹೇಗೆ ಚಲನ್​ ನೀಡಲಾಯ್ತು ಎಂದು ಪ್ರಶ್ನಿಸಿದ್ದಾರೆ.
ನನ್ನ ಸ್ನೇಹಿತ ತನ್ನ ಟಾಟಾ ನೆಕ್ಸಾನ್ ಕಾರನ್ನು ಡಿಸೆಂಬರ್ 22, 2023ರಂದು ಖರೀದಿಸಿದರು. ಅದನ್ನು ಜನವರಿ 6, 2024ರಂದು ನೋಂದಾಯಿಸಿದರು. ಚಲನ್ ಬಂದಿರಬಹುದೇ ಎಂದು ಸುಮ್ಮನೇ ಪರಿಶೀಲಿಸಿದಾಗ ಡಿಸೆಂಬರ್​ 14, 2020ದಂದು ಚಲನ್ ಬಂದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ:Darshan Thoogudeepa | ಹುಟ್ಟಹಬ್ಬದಂದು ಪತ್ನಿ ಜತೆ ಡ್ಯುಯೆಟ್​​ ಹಾಡಿದ ಡಿ ಬಾಸ್​ ದರ್ಶನ್​
ನಂಬರ್ ಪ್ಲೇಟ್​ ವಿಚಾರವಾಗಿ ಚಲನ್​ ರವಾನೆಯಾಗಿದೆ. ಆದರೆ, ಆ ವರ್ಷದಲ್ಲಿ ಅವರು ಕಾರನ್ನೇ ಖರೀದಿ ಮಾಡಿರಲಿಲ್ಲ ಅಂದಮೇಲೆ ಈ ದಂಡ ಹೇಗೆ ಸಾಧ್ಯ? ತೆಲಂಗಾಣ ಸಂಚಾರ ಪೊಲೀಸರೇ ದಯವಿಟ್ಟು ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).
“2028ಕ್ಕೆ ವಿರಾಟ್ ಕೊಹ್ಲಿ ನಿವೃತ್ತಿ”: ವೈರಲ್ ಆಗ್ತಿದೆ 2016ರಲ್ಲಿ ಈ ಜ್ಯೋತಿಷಿ ನುಡಿದ ಭವಿಷ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eleven =
Remember me
