ಕಟಕ್​:ಇತ್ತೀಚೆಗಷ್ಟೇ ಒಡಿಶಾದ ಕಟಕ್​​ನಲ್ಲಿರುವ ಎಸ್​ಸಿಬಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಪ್ಲಾಸ್ಟಿಕ್​ ಸರ್ಜರಿ ವಿಭಾಗವೂ ತುಂಡಾಗಿದ್ದ ವ್ಯಕ್ತಿಯೊಬ್ಬನ ಮರ್ಮಾಂಗವನ್ನು ಮರು ಜೋಡಣೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.
ಕೆಲವು ಕಾರಣಗಳಿಂದ ಮರ್ಮಾಂಗ ತುಂಡಾಗಿದ್ದ ಬಾಲಾಸೋರ್​ನ ರೆಮುನಾ ಏರಿಯಾದ ನಿವಾಸಿಯನ್ನು ಎಸ್​ಸಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದ 11 ಗಂಟೆಗಳಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಮೆಡಿಕಲ್​ ಕೇಸ್​ ಎಸ್​ಸಿಬಿ ವೈದ್ಯರಿಗೆ ಬಹುದೊಡ್ಡ ಸವಾಲಾಯಿತು.
ಇದನ್ನೂ ಓದಿರಿ:ಆನ್​ಲೈನ್​ ಮೀಟಿಂಗ್​ ನಡುವೆಯೇ ಬೆತ್ತಲೆ ಕಾಣಿಸಿಕೊಂಡ ರಾಜಕಾರಣಿಯ ಪತ್ನಿ: ವೈರಲ್​ ಆಯ್ತು ವಿಡಿಯೋ!
ಪ್ಲಾಸ್ಟಿಕ್​ ಸರ್ಜರಿ ವಿಭಾಗದ ಡಾ. ಬಿಭುತಿ ಭೂಷಣ್​ ನಾಯಕ್​ ನೇತೃತ್ವದಲ್ಲಿ ವೈದ್ಯರ ತಂಡವೊಂದು ಮ್ಯಾರಥಾನ್ ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿಗೆ ತುಂಡಾಗಿದ್ದ ಮರ್ಮಾಂಗವನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಸಂತ್ರಸ್ತ ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದೆ. ಆದಷ್ಟು ಬೇಗ ಆತ ಸಹಜ ಜೀವನಕ್ಕೆ ಮರಳುತ್ತಾನೆಂದು ಬಿಭುತಿ ಹೇಳಿದ್ದಾರೆ.
ನಮ್ಮ ತಂಡದಲ್ಲಿ 3 ರಿಂದ 4 ಸರ್ಜನ್​ಗಳಿದ್ದರು ಮತ್ತು ಆಪರೇಷನ್​ಗೆ 5 ಗಂಟೆಗಳ ಸಮಯ ಹಿಡಿಯಿತು. ಸಂರಕ್ಷಣೆಯಲ್ಲಿ ವಿಳಂಬ ಆಗಿರುವುದರಿಂದ ಕತ್ತರಿಸಿದ ಭಾಗವು ಉಳಿದುಕೊಳ್ಳುತ್ತದೆಯೋ? ಅಥವಾ ಇಲ್ಲವೋ? ಎಂಬ ಅನುಮಾನ ಆರಂಭದಲ್ಲಿತ್ತು. ಆದರೆ, ಅದೃಷ್ಟವಶಾತ್ ಅದು ಉಳಿದುಕೊಂಡಿತು ಎಂದು ಬಿಭುತಿ ತಿಳಿಸಿದರು.
ಸದ್ಯ ರೋಗಿಯ ಸ್ಥಿತಿ ಸ್ಥಿರವಾಗಿದೆ. ಮೂತ್ರದ ಹರಿವು ಸಹ ಸಹಜವಾಗಿದೆ ಮತ್ತು ಕಳೆದ ಕೆಲವು ದಿನಗಳಿಂದ ನಿಮಿರುವಿಕೆಯು ಸಹ ಆರಂಭವಾಗಿದೆ. ಮರ್ಮಾಂಗಳ ಮರುಜೋಡಣೆ ಶಸ್ತ್ರಚಿಕಿತ್ಸೆಗಳು ಈ ಹಿಂದೆ ಒಡಿಶಾದ ಹೊರಗಿನ ಇತರೆ ಆಸ್ಪತ್ರೆಗಳಲ್ಲಿ ನಡೆದಿದ್ದರೂ, ಎಸ್‌ಸಿಬಿಯಲ್ಲಿ ಇದೇ ಮೊದಲ ಬಾರಿಗೆ ನಡೆಸಲಾಯಿತು ಎಂದಿದ್ದಾರೆ.
ಇದನ್ನೂ ಓದಿರಿ:ಕೆಲ್ಸದಿಂದ ಮನೆಗೆ ಬಂದವನು ಪತ್ನಿಗಾಗಿ ಹುಡುಕಾಡುವಾಗ ಕಾದಿತ್ತು ಶಾಕ್​: ಇದು ಅತಿ ಕೆಟ್ಟ ಅಕ್ರಮ ಸಂಬಂಧವಂತೆ!
ರೋಗಿಯ ತಾಯಿ ಮಾತನಾಡಿ, ಮೈದಾನವೊಂದರಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದವನನ್ನು ಬಾಲಸೋರ್​ ಆಸ್ಪತ್ರೆಗೆ ದಾಖಲಿಸಿದೆವು. ಬಳಿಕ ಎಸ್​ಸಿಬಿ ಆಸ್ಪತ್ರೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದರು. ಬಳಿಕ ಕಟಕ್​ನಲ್ಲಿರು ಎಸ್​ಸಿಬಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದೆವು. ನನ್ನ ಮಗ ಸಹಜ ಜೀವನಕ್ಕೆ ಮರಳುತ್ತಾನೆಂಬ ಭರವಸೆ ಇದೆ. ನಾವೀಗ ಖುಷಿಯಾಗಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಲಾಕ್​ ಆಗಿದ್ದ ಮನೆಯ ಬಾಗಿಲು ಮುರಿದು ಫ್ರಿಡ್ಜ್​ ತೆರೆಯುತ್ತಿದ್ದಂತೆ ಬೆಚ್ಚಿಬಿದ್ದ ಪೊಲೀಸರು..!

50 ವರ್ಷಗಳ ಬಳಿಕ ಪ್ರೇಮಿಗಳ ಮಿಲನ… 82 ವರ್ಷದ ಅಜ್ಜನಲ್ಲಿ ಪುಳಕ… ಇದು ಡಿಫರೆಂಟ್​ ಲವ್​ ಸ್ಟೋರಿ…

ಮಗು ಗರ್ಭದಲ್ಲಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ- ನಂಬಲು ಆಗ್ತಿಲ್ವಾ? ಈ ಘಟನೆ ಓದಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 11 =
Remember me
