ನವದೆಹಲಿ:ಕಷ್ಟಕಾಲಕ್ಕೆ ನೆರವಾಗಲಿ ಎಂದೋ ಅಥವಾ ಆಕಸ್ಮಿಕವಾಗಿ ಸತ್ತರೆ ಕುಟುಂಬದವರಿಗೆ ಅನುಕೂಲವಾಗಲಿ ಎಂದೋ ಜನರು ಜೀವವಿಮೆ ಮಾಡಿಸುತ್ತಾರೆ. ಈತನೂ ಕೂಡ ಅದೇ ಉದ್ದೇಶದಿಂದ ದೊಡ್ಡ ಮೊತ್ತಕ್ಕೆ ಜೀವವಿಮೆ ಮಾಡಿಸಿದ್ದ. ಆದರೆ, ಅದನ್ನು ಪಡೆದುಕೊಳ್ಳಲು ಅಡ್ಡದಾರಿ ಹಿಡಿದು ಇಹಲೋಕವನ್ನೇ ತ್ಯಜಿಸಿದ್ದಾನೆ!
ಹೌದು. ಗೌರವ್​ (37) ದೆಹಲಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ. ವಹಿವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಲಕ್ಷಾಂತರ ರೂಪಾಯಿ ಮೊತ್ತದ ಕ್ರೆಡಿಟ್​ಕಾರ್ಡ್​ ಹೊಂದಿದ್ದ. ಈತನ ದುರದೃಷ್ಟಕ್ಕೆ ಸೈಬರ್​ ಕಳ್ಳರು ಈತನ ಕ್ರೆಡಿಟ್​ಕಾರ್ಡ್​ನ ಮಾಹಿತಿ ಕದ್ದು 3.5 ಲಕ್ಷ ರೂ. ವಂಚಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಂತೆ ಈತ 6 ಲಕ್ಷ ರೂ. ವೈಯಕ್ತಿಕ ಸಾಲವನ್ನೂ ಪಡೆದುಕೊಂಡಿದ್ದ.
ಇನ್ನೇನು ಬದುಕು ಸುಗುಮವಾಗಬೇಕು ಎನ್ನುವಾಗಲೇ ಈತನಿಗೆ ತನ್ನ ಜೀವವಿಮೆ ಹಣವನ್ನೂ ಪಡೆದುಕೊಂಡು, ಕುಟುಂಬಕ್ಕೆ ಆರ್ಥಿಕ ಸ್ಥಿರತೆ ಒದಗಿಸುವ ಭೂತ ಹೊಕ್ಕಿತು. ಈ ಹಿನ್ನೆಲೆಯಲ್ಲಿ ಆತ ತನ್ನನ್ನು ತಾನೇ ಕೊಂದುಕೊಳ್ಳಲು ಮುಂದಾದ. ಇದಕ್ಕಾಗಿ ಆತ ಸುಪಾರಿ ಕಿಲ್ಲರ್​ಗಳ ಸಹಾಯ ಪಡೆದುಕೊಂಡ.
ಇದನ್ನೂ ಓದಿ:ಆಭರಣ ಕದ್ದನೆಂದು 12 ವರ್ಷದ ಬಾಲಕನಿಗೆ ಸಿಗರೆಟ್​ನಿಂದ ಸುಟ್ಟರು, ವಿದ್ಯುತ್​ ಶಾಕ್​ ನೀಡಿದರು!
ಅದೊಂದು ದಿನ ನಿರ್ಜನವಾದ ಪ್ರದೇಶಕ್ಕೆ ಹೋದ ಗೌರವ್​ ತನ್ನ ಸುಪಾರಿ ಕಿಲ್ಲರ್​ಗಳನ್ನು ಕರೆಯಿಸಿಕೊಂಡ. ತನ್ನ ಕೈಕಾಲು ಕಟ್ಟಿಸಿಕೊಂಡು ಮರಕ್ಕೆ ನೇಣು ಬಿಗಿಸಿಕೊಂಡು ಸಾವನಪ್ಪಿದ. ಅಂದು ಅಂಗಡಿಗೆ ಹೋದ ಪತಿ ಎಷ್ಟೊತ್ತಾದರೂ ಹಿಂದಿರುಗದಿದ್ದಾಗ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ, ಅವರು ಕಳೆದ ಕೆಲವು ತಿಂಗಳಿಂದ ಖಿನ್ನತೆಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂಗತಿಯನ್ನೂ ತಿಳಿಸಿದರು.
ತನಿಖೆ ಆರಂಭಿಸಿದ ಪೊಲೀಸರಿಗೆ ದೆಹಲಿಯ ರಣ್​ಹೌಲಾ ಪ್ರದೇಶದಲ್ಲಿ ಮರದಲ್ಲಿ ನೇತಾಡುತ್ತಿದ್ದದ್ದು ಕಂಡುಬಂದಿತು. ಅವರ ಮೊಬೈಲ್​ ಕಾಲ್​ರೆಕಾರ್ಡ್​ ಪರಿಶೀಲಿಸಿದಾಗ ಸಾಯುವ ಹಂತದವರೆಗೂ ಅವರು ಬಾಲಕನೊಬ್ಬನ ಸಂಪರ್ಕದಲ್ಲಿರುವುದು ಪತ್ತೆಯಾಯಿತು. ಅ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗಿ ಜೀವವಿಮೆ ಹಣಪಡೆಯುವ ಗೌರವ್​ ನಾಟಕ ಬಯಲಾಗಿದೆ.
ಮೀನಿಗೆ ಗಾಳ ಹಾಕಿದಾಗ ಮಕ್ಕಳಿಗೆ ಸಿಕ್ತು ಚಿನ್ನದ ಮೂರ್ತಿ: ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 20 =
Remember me
