ಮುಂಬೈ:ಅಪ್ಪ ಅಮ್ಮನಿಗೆ ತಮ್ಮ ಬೈದ ಎನ್ನುವ ಕಾರಣಕ್ಕೆ ಆತನನ್ನೇ ಕೊಲೆ ಮಾಡಿದ್ದ ಅಣ್ಣನಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಇದೀಗ ತೀರ್ಪು ಸಿಕ್ಕಿದೆ.
ಸುನಿಲ್​ ತನ್ನ ಅಪ್ಪ ಅಮ್ಮ ಹಾಗೂ ತಮ್ಮ ಆಕಾಶ್ ಜತೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದ. ಆಗಿನ್ನೂ 19 ವರ್ಷದವನಾಗಿದ್ದ ಆಕಾಶ್​ ಮದ್ಯಪಾನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದನಂತೆ. ಪ್ರತಿದಿನ ಅಪ್ಪ ಅಮ್ಮ ಮತ್ತು ಅಣ್ಣನನ್ನು ಪೀಡಿಸಿ ಹಣ ತೆಗೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿದು ಮನೆಗೆ ಬರುತ್ತಿದ್ದನಂತೆ. ಹಣ ಕೊಡದಿದ್ದರೆ ಎಲ್ಲರ ಮೇಲೂ ರೇಗಾಡುತ್ತಿದ್ದನಂತೆ.
ಅದೇ ರೀತಿ ಆ ದಿನವೂ ಆಗಿದೆ. ಆಕಾಶ್​ ತಾಯಿಯ ಬಳಿ ಬಂದು 500 ರೂಪಾಯಿ ಕೇಳಿದ್ದಾನೆ. ಆಕೆ ಕೊಡಲು ನಿರಾಕರಿಸಿದಾಗ ಸಿಟ್ಟಿನಿಂದ ಮನೆಯಿಂದ ಹೊರಗೆ ಹೋಗಿದ್ದಾನೆ. ಮತ್ತೆ ಮನೆಗೆ ಬಂದು ಸುನಿಲ್​ ಬಳಿ 2000 ಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದಾಗಲೇ ಆತನ ಮೇಲೆ ಸಿಟ್ಟಾಗಿದ್ದ ಸುನಿಲ್​ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯವಾಗಿದ್ದರಿಂದಾಗಿ ಆಕಾಶ್​ ಪ್ರಾಣ ಬಿಟ್ಟಿದ್ದ. ಆ ಪ್ರಕರಣದ ತೀರ್ಪು ಇದೀಗ ಬಂದಿದ್ದು, ಅಪರಾಧಿಗೆ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಲಾಗಿದೆ. (ಏಜೆನ್ಸೀಸ್)
ಲಾಕ್​ಡೌನ್​ ಎಫೆಕ್ಟ್​: ಕುಮಾರ ಬಂಗಾರಪ್ಪ ಮಗಳ ಮದುವೆ ಮುಂದೂಡಿಕೆ

ಪರಿಚಿತ ಯುವತಿಗೆ ಸುಳ್ಳು ಹೇಳಿ ಬೆಟ್ಟದ ಕಡೆಗೆ ಕರೆದೊಯ್ದ ಯುವಕನಿಂದ ನಡೆಯಿತು ಭೀಕರ ಕೃತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + two =
Remember me
