ಲಖನೌ:ಚಿರತೆಯನ್ನು ಸೆರೆಹಿಡಿಯಲು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿದ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ಕೇರಳ, ಕರ್ನಾಟಕ, ಜಾರ್ಖಂಡ್​ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವು ಕಳವಳಕಾರಿ ಸಂಗತಿಯಾಗಿದೆ. ಬುಲಂದ್​ಶಹರ್​ ಜಿಲ್ಲೆಯ ಗ್ರಾಮದೊಂದರ ಸಮೀಪದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆಹಿಡಿಯಲು ಸ್ಥಳೀಯ ಅರಣ್ಯಾಧಿಕಾರಿಗಳು ಬೋನ್​ ಇಟ್ಟು, ಅದರೊಳಗೆ ಒಂದು ಕೋಳಿಯನ್ನು ಕಟ್ಟಿದ್ದರು.
ಇದನ್ನೂ ಓದಿ:ಸಿಡಬ್ಲ್ಯುಸಿ ಸದಸ್ಯತ್ವ: ಖರ್ಗೆಗೆ ಪೂರ್ಣಾಧಿಕಾರ; ಚುನಾವಣೆ ಇಲ್ಲ, ನಾಮ ನಿರ್ದೇಶನಕ್ಕೆ ಅವಕಾಶ
ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಚಿರತೆ ಇರಬೇಕಾದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಇರುವುದನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಬೋನ್​ನಲ್ಲಿದ್ದ ಕೋಳಿಯನ್ನು ಹಿಡಿಯಲು ಹೋಗಿ ತಾನೇ ಬೋನಿನ ಒಳಗೆ ಸೆರೆಯಾಗಿದ್ದಾನೆ ಎಂದು ಹೇಳಲಾಗಿದೆ.
ಬೋನ್​ನಿಂದ ಹೊರಬರಲು ಎಷ್ಟೇ ಪ್ರಯತ್ನ ಮಾಡಿದರೂ ಆತನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿದರು. ಸದ್ಯ ಬೋನಿನಲ್ಲಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.(ಏಜೆನ್ಸೀಸ್​)
#WATCH| Uttar Pradesh: A man got stuck in a cage, installed to nab a leopard, in Basendua village of Bulandshahr dist. Forest Dept says that the man had entered the cage to get a rooster that was kept there as bait for the leopard.
(Video: viral video confirmed by Forest Dept)pic.twitter.com/8ujj23I2AO
— ANI UP/Uttarakhand (@ANINewsUP)February 24, 2023

ಅದಾನಿಗೆ 12 ಲಕ್ಷ ಕೋಟಿ ರೂ. ನಷ್ಟ: ಹಿಂಡನ್​ಬರ್ಗ್ ವರದಿ ಪರಿಣಾಮ, ಕಂಪನಿಗಳ ಷೇರುಗಳಲ್ಲಿ ಕುಸಿತ

ಖಾಸಗಿ ಫೋಟೋ ಸೋರಿಕೆ: ನಟಿ ಆಲಿಯಾ ಭಟ್ ಆಕ್ರೋಶ, ದೂರು ದಾಖಲಿಸಿ ಎಂದ ಮುಂಬೈ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
